ದೇವದುರ್ಗ: ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ತಂದೆ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಜಕ್ಲೇರದೊಡ್ಡಿ ಗ್ರಾನದಲ್ಲಿ ಶನಿವಾರ ಮಧ್ಯೆರಾತ್ರಿ ನಡೆದಿದೆ.
ಕೊಲೈಗೀಡಾದ ಬಾಲಕರಾದ ಶಿವರಾಜ(5) ಹಾಗೂ ರಾಘವೇಂದ್ರ(3) ಎಂದು ಗುರುತಿಸಲಾಗಿದೆ. ಮೃತ ಬಾಲಕರ ತಂದೆಯಾದ ನಿಂಗಪ್ಪ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ನಿ ಪ್ರಭಾವತಿ ಅವರಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಅವರಿಗೆ ಹುಟ್ಟಿರುವ ಇಬ್ಬರು ಮಕ್ಕಳಾಗಿದ್ದಾರೆ ಆರೋಪಿಸಿ, ಈ ಮಕ್ಕಳನ್ನು ಕೊಲೈಮಾಡುವುದಾಗಿ ಹೇಳಿ ಆರೋಪಿ ನಿಂಗಪ್ಪ ಕೈಯಿಂದ ಮಕ್ಕಳ ಕತ್ತು ಹಿಸುಕಿ ಕೊಲೈ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.