ಬೆಳಗಾವಿ: ಇಟ್ಟಿಗೆ ಸಾಗಿಸುತ್ತಿದ್ದ ಗೂಡ್ಸ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿ, ಚಾಲಕ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ದಾವಲಸಾಬ ಫಯಾಜ್ ಮುನವಳ್ಳಿ ಎಂಬುವರೇ ಮೃತ ದುರ್ದೈವಿ. ಮನೆ ಕೆಲಸಕ್ಕಾಗಿ ಇಟ್ಟಿಗೆ ಸಾಗಿಸುತ್ತಿದ್ದ ಗೂಡ್ಸ್ ಗಾಡಿ ದೇವಲತ್ತಿ ಪಾರಿಶ್ವಾಡ ಮಧ್ಯದಲ್ಲಿ ಪಲ್ಟಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಮಂಜುನಾಥ ಚಂದ್ರು ಕುಕಡೊಳ್ಳಿ ಹಾಗೂ ಮಂಜುನಾಥ ಈರಪ್ಪ ಗುರನ್ನವರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.