ನೇಮಕಾತಿ ವಿಷಯವಾಗಿ ನನಗೆ ಲಂಚದ ಆಮೀಷ ಒಡ್ಡಿದ್ದಾರೆಂದು ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಗೋಯಲ್ ಅಸೆಂಬ್ಲಿಯಲ್ಲಿ ಹೇಳಿದ್ದಾರೆ.
ದೆಹಲಿಯ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿರುವ ಅವರು, ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮೌನವಾಗಿರಲು ತನಗೆ ಲಂಚ ನೀಡಲು ಪ್ರಯತ್ನಿಸಲಾಗಿದೆ ಎಂದು ಅಸೆಂಬ್ಲಿಯಲ್ಲಿ ನೋಟಿನ ಬಂಡಲ್‍ಗಳನ್ನು ಪ್ರದರ್ಶಿಸಿದ್ದಾರೆ.