ಅಪಘಾತ: ಮೂವರು ಸಾವು

0
12

ಹುಬ್ಬಳ್ಳಿ: ಪುನಾ-ಬೆಂಗಳೂರು ರಸ್ತೆಯ ವರೂರು ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ
ದಾವಣಗೆರೆ ಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರಿನಲ್ಲಿ ನಾಲ್ಕು ಜನ ಪ್ರಯಾಣವನ್ನು ಮಾಡುತ್ತಿದ್ದಾಗ ವರೂರು ಬಳಿ ಅಪಘಾತ ನಡೆದಿದೆ.
ದಾವಣಗೆರೆ ಮೂಲದ ಶಾರುಖ್, ಸೋಹೆಲ್ ಹಾಗೂ ಸುಶೀಲಾ ಎಂಬುವರು ಮೃತಪಟ್ಟಿದ್ದಾರೆ.
ಫಯಾಜ್ ಎಂಬುವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಪಿಐ ರಮೇಶ ಗೋಕಾಕ ಭೇಟಿ ನೀಡಿ,ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಕಾಲುವೆಗೆ ಬಿದ್ದ ಆಟೋ: ಮೂವರು ಸಾವು, ಮೂವರು ನಾಪತ್ತೆ
Next articleಸಾವಿನಲ್ಲೂ ಸಾರ್ಥಕತೆ ಮೆರೆದ ಡಾ. ಎಂ.ಬಿ.ಮುನೇನಕೊಪ್ಪ