ಅಪಘಾತ: ಮಹಿಳೆ ಸಾವು

0
17

ವಿಜಯಪುರ: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಚಡಚಣ ತಾಲೂಕಿನ ಧೂಳಖೇಡ ಬಳಿ ನಡೆದಿದೆ.
ಬೈಕ್ ಮೇಲೆ ಹೊರಟಿದ್ದ ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ಜಿಲ್ಲೆಯ ಬಂಡರಗವಟ ಗ್ರಾಮದ ಜನಾಬಾಯಿ ಗುಮತಾಪುರೆ(47) ಮೃತಪಟ್ಟಿದ್ದು, ಜನಾಬಾಯಿ ಪತಿ ಗಂಗಾರಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಗೃಹಲಕ್ಷ್ಮೀ ಹೆಸರಲ್ಲಿ ಮಹಿಳೆಯರಿಂದ ಹಣ ವಸೂಲಿ
Next articleರೈಲ್ವೆ ಕೆಳಸೇತುವೆಯಲ್ಲಿ ನೀರು: ಬೈಕ್ ಹೊತ್ತು ದಾಟಿದ ವ್ಯಕ್ತಿ