ಕುಷ್ಟಗಿ: ತಾಲೂಕಿನ ತಳುವಗೇರಾ-ಚಳಗೇರಾ ರಸ್ತೆಯಲ್ಲಿ ಬರುವ ನೀರಿನ ಟ್ಯಾಂಕ್ ಹತ್ತಿರ ಇರುವ ಮರಕ್ಕೆ ಕಾರ ಚಾಲಕ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ನುಚ್ಚುನೂರಾಗಿದ್ದು ಕಾರಿನಲ್ಲಿ ಇದ್ದ ಚಾಲಕ ಹಾಗೂ ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಖಲಿಸಲಾಗಿದೆ.
ತಾಲೂಕಿನ ಮುಗನೂರು ಗ್ರಾಮದ ಕಾರ ಚಾಲಕ ದಾವಲ್ ಸಾಬ್ ಇಮಾಮ್ ಸಾಬ್ ಅತ್ತಾರ(೨೭) ಈ ಚಾಲಕನಿಗೆ ಹೊಟ್ಟೆಯ ಭಾಗ, ಹಣೆಯ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿಂಬದಿಯ ಸವಾರನಿಗೆ ಕಾಲಿಗೆ ಮತ್ತು ಮುಖಕ್ಕೆ ಗಾಯವಾಗಿದ್ದು, ಸ್ಥಳದಲ್ಲಿ ಇದ್ದ ಜನರು ೧೦೮ ಆಂಬುಲೆನ್ಸ್ ಗೆ ಕರೆ ಮಾಡಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಆಂಬುಲೆನ್ಸ್ ಸಿಬ್ಬಂದಿ ಘಟನಾಸ್ಥಳಕ್ಕೆ ಹೋಗಿ ಗಾಯಗೊಂಡ ಚಾಲಕ ಹಾಗೂ ಹಿಂಬದಿಯ ಸವಾರರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರ ಮಾರ್ಗದರ್ಶನದಂತೆ ಪಿಎಸೈ ಮೌನೇಶ್ ರಾಠೋಡ್ ಭೇಟಿಕೊಟ್ಟು ಪರಿಶೀಲಿಸಿದ ಬಳಿಕ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಮತ್ತು ಹಿಂಬದಿ ಸವಾರ ಪ್ರಾಣಾಯಾಪಾಯದಿಂದ ಪಾರಾಗಿದ್ದಾರೆ.