ಬಾಗಲಕೋಟೆ: ಅಂಗನವಾಡಿಯಲ್ಲಿ ಅಡುಗೆ ಮಾಡುವ ವೇಳೆ ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಬ್ಯಾಡಗಿ ವಸತಿಯಲ್ಲಿ ನಡೆದಿದೆ.
ಸಮರ್ಥ(೨), ಅದ್ವಿಕ್(೪) ಗಾಯಗೊಂಡಿರುವ ಮಕ್ಕಳು.ಇಬ್ಬರನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳಿ ಕುಕ್ಕರ್ ಬ್ಲಾಸ್ಟ್ ನಿಂದ ಗಾಯಗೊಂಡಿಲ್ಲ. ಗಾಬರಿಯಿಂದ ಓಡುವಾಗ ಬಿದ್ದಿದ್ದು, ಅದರಿಂದ ಗಾಯಗಳಾಗಿವೆ ಎಂದು ಜಮಖಂಡಿ ಸಿಡಿಪಿಒ ಅನುರಾಧ ಹಾದಿಮನಿ ತಿಳಿಸಿದ್ದಾರೆ. ಅಡುಗೆ ಸಿಬ್ಬಂದಿಗೆ ರಭಸವಾದ ಕುಕ್ಕರ್ ಹವೆಯಿಂದ ಸಣ್ಣಪುಟಗಟ ಗಾಯಗಳಾಗಿವೆ ಎಂದು ತಿಳಿಸಿದರು.