ಅವಲಕ್ಕಿ ರಾಗೀಹಿಟ್ಟಿನ ರೊಟ್ಟಿ

ಅವಲಕ್ಕಿ ರಾಗೀಹಿಟ್ಟಿನ ರೊಟ್ಟಿ
Advertisement

ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಅವಲಕ್ಕಿ, ಒಂದೂವರೆ ಬಟ್ಟಲು ರಾಗೀಹಿಟ್ಟು, ೨ ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡರಿಂದ ಮೂರು ಹಸಿಮೆಣಸಿನಕಾಯಿ ಪೇಸ್ಟ್, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಕರಿಬೇವು ಸಣ್ಣಗೆ ಹೆಚ್ಚಿದ್ದು, ಜೀರಿಗೆ ಎರಡು ಚಮಚ, ಕಾಯಿತುರಿ ಅರ್ಧ ಬಟ್ಟಲು, ರುಚಿಗೆ ಉಪ್ಪು, ಎಣ್ಣೆ, ರೊಟ್ಟಿ ಮಾಡಲು ಒಂದು ಒಬ್ಬಟ್ಟಿನ ಪೇಪರ್.
ಮಾಡುವ ವಿಧಾನ: ಅವಲಕ್ಕಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ ರಾಗೀಹಿಟ್ಟಿನೊಂದಿಗೆ ಸೇರಿಸಿ. ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಾಯಿತುರಿ ಸೇರಿಸಿ ಚೆನ್ನಾಗಿ ಬೆರಸಿ ಬೆಚ್ಚಗಿರುವ ನೀರಿನೊಂದಿಗೆ ರೊಟ್ಟಿಯ ಹದಕ್ಕೆ ಕಲಸಿ. ಒಬ್ಬಟ್ಟಿನ ಹಾಳೆಯಲ್ಲಿ ಒಂದೊಂದೇ ರೊಟ್ಟಿ ತಟ್ಟಿ ತವದಲ್ಲಿ ಎಣ್ಣೆಯೊಂದಿಗೆ ಬೇಯಿಸಿದರೆ ಗರಿಯಾದ ಬಿಸಿಯಾದ ರೊಟ್ಟಿ ಬೆಣ್ಣೆಯೊಡನೆ ಸವಿಯಲು ತಯಾರಾಗುತ್ತವೆ.

ಗಿರಿಜಾ ಎಸ್.ದೇಶಪಾಂಡೆ, ಬೆಂಗಳೂರು

ಅವಲಕ್ಕಿ ರಾಗೀಹಿಟ್ಟಿನ ರೊಟ್ಟಿ