ಮೊಡವೆ ನಿವಾರಣೆಗೆ ಸುಲಭ ಪ್ಯಾಕ್

ಮೊಡವೆ ನಿವಾರಣೆ
Advertisement

ಯುವತಿಯರಲ್ಲಿ ಮೊಡವೆ ಮೂಡುವುದು ಸಾಮಾನ್ಯ. ಆದರೆ ಮೊಡವೆ ಇಲ್ಲದ ಮುಖ ಯುವತಿಯರ ಕನಸು. ಮೊಡವೆ ನಿವಾರಣೆಗೆ ಕೆಲ ಸುಲಭ ಮನೆಯಲ್ಲೇ ಮಾಡಬಹುದಾದ ಫೇಸ್ ಪ್ಯಾಕ್‌ಗಳು ರಾಮಬಾಣದಂತೆ ಕೆಲಸ ಮಾಡುತ್ತವೆ.

ಮೊಡವೆ ನಿವಾರಣೆ

ಈರುಳ್ಳಿ ಪ್ಯಾಕ್
ಬೇಕಾಗುವ ಸಾಮಗ್ರಿಗಳು: ಎರಡು ಟೇಬಲ್ ಚಮಚ ಈರುಳ್ಳಿ ರಸ, ಒಂದು ಟೀ ಚಮಚ ಆಲಿವ್ ಎಣ್ಣೆ.
ತಯಾರಿಸುವ ವಿಧಾನ: ಒಂದು ಈರುಳ್ಳಿ ಕತ್ತರಿಸಿ ಮಿಕ್ಸರ್‌ಗೆ ಹಾಕಿ ನುಣ್ಣಗೆ ಮಾಡಿಕೊಳ್ಳಿ. ಇದನ್ನು ಹಿಂಡಿ ರಸ ತೆಗೆದಿಟ್ಟುಕೊಳ್ಳಿ. ಎರಡು ಚಮಚ ಈರುಳ್ಳಿ ರಸಕ್ಕೆ ಒಂದು ಟೀ ಚಮಚ ಎಣ್ಣೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷ ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.

ಮೆಂತೆ ಸೊಪ್ಪಿನ ಪ್ಯಾಕ್
ಮೆಂತೆ ಸೊಪ್ಪನ್ನು ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ಮೇಲೆ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಮೊಡವೆಗಳು ಕಡಿಮೆಯಾಗುವುದರ ಜತೆಗೆ ಚರ್ಮವೂ ಮೃದುವಾಗುತ್ತದೆ.
ಇದನ್ನು ನಿಯಮಿತವಾಗಿ ಮಾಡುವುದರಿಂದ ಮೊಡವೆ ಮಾಯವಾಗುವುದಲ್ಲದೇ, ತ್ವಚೆ ಕಾಂತಿಯೂ ಹೆಚ್ಚುತ್ತದೆ.

ಅಲೋವಿರಾ
ಹಠಮಾರಿ ಕಲೆಗಳಿಗೆ ಅಲೋವಿರಾ(ಲೊಳಸರ) ದಿವ್ಯೌಷಧ. ಕಲೆ ಸೇರಿದಂತೆ ಇಡೀ ಮುಖಕ್ಕೆ ಅಲೋವಿರಾ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಿ.

ಬೇಕಿಂಗ್ ಪೌಡರ್
ಬೇಕಿಂಗ್ ಪೌಡರ್ ಅನ್ನು ನೀರಿನಲ್ಲಿ ಕಲೆಸಿಟ್ಟುಕೊಳ್ಳಿ. ನೊರೆ ಬಿಡಲು ಬಿಡಿ. ಇದನ್ನು ಮೊಡವೆ ಕಲೆಗಳಿಗೆ ಹಚ್ಚಿ ತೊಳೆದುಕೊಳ್ಳಿ.