ಕನ್ನಡಿಗರಿಂದ ಅಮುಲ್‌ಗೆ ಬಾಯ್ಕಾಟ್‌ ಅಭಿಯಾನ

ನಂದಿನಿ ಉಳಿಸಿ
Advertisement

ಅಮುಲ್‌ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉಳಿಸಿ ಅಭಿಯಾನ ಆರಂಭ ಮಾಡಿದ್ದಾರೆ.
ಹಾಲು ಮೊಸರಿನ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಕ್ವಿಕ್ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್ಡರ್‌ ಮಾಡಬಹುದು. ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ ಎಂದು ಟ್ವೀಟ್ ಮಾಡಿತ್ತು. ಕರ್ನಾಟಕದ ಕೆಎಂಎಫ್‌ ಹಾಗೂ ಗುಜರಾತ್‌ನ ಅಮೂಲ್‌ ವೀಲಿನಕ್ಕೆ ಸಂಬಂಧಿದಂತೆ ಎದ್ದ ವಿವಾದ ತಣ್ಣಗಾಗುವುದರ ಒಳಗೆ ಈಗ ಅಮುಲ್‌ ಉತ್ಪನ್ನದ ಸುದ್ದಿ ಬಂದಿರುವುದು ಕನ್ನಡಿಗರಲ್ಲಿ ಸಹಜವಾಗಿ ಆಕ್ರೋಶವನ್ನು ತಂದಿದೆ. ಅಮೂಲ್‌ ಬಗ್ಗೆ ಟ್ವೀಟ್ಟರ್‌ನಲ್ಲಿ ಆಕ್ರೋಶ ಜೋರಾಗುತ್ತಿದ್ದು, ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರಾಂಡ್ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದು ಅಭಿಯಾನ ಆರಂಭಿಸಿದ್ದಾರೆ. ಇಷ್ಟು ದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು.
ಈಗ ನಂದಿನಿಯ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿ #ನಂದಿನಿಉಳಿಸಿ, #SaveNandini #savekmf #gobackamul #BoycottAmul #gobackAMUL #saveKMF ಬಾಯ್ಕಾಟ್‌ ಅಮೂಲ್‌ ಸೇವ್‌ ನಂದಿನಿ ಕೆಎಂಎಫ್‌ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನ ಶುರುವಾಗಿದೆ.