ದೈವ ಕಾರ್ಣಿಕದಂತೆ 300 ವರ್ಷ ಹಳೆಯ ದೈವಸ್ಥಾನ ಪತ್ತೆ

0
34

ಮಂಗಳೂರು: ಮಣ್ಣಿನಡಿ ಹುದುಗಿಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನವೊಂದು ಪತ್ತೆಯಾಗಿದೆ. ಮಂಗಳೂರಿನ ಹೊರವಲಯದ ನೀರುಮಾರ್ಗದ ಪೆದಮಲೆ ಗ್ರಾಮದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದ್ದು, ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ದೈವಸ್ಥಾನದ ಸುಳಿವು ದೊರೆತಿದೆ. 300 ವರ್ಷಗಳಿಂದ ದೈವಸ್ಥಾನ ಗ್ರಾಮದ ಜನರ ಅರಿವಿಗೆ ಬಾರದೇ ಮಣ್ಣಿನಡಿ ಹುದುಗಿತ್ತು. ಪಾಳುಬಿದ್ದು ಪೊದೆಗಳಿಂದ ಆವೃತವಾಗಿದ್ದ ದಟ್ಟ ನಿರ್ಜನ ಪ್ರದೇಶದಲ್ಲಿ ಗ್ರಾಮದ ಇಂದಿನ ಪೀಳಿಗೆಗೆ ದೈವಸ್ಥಾನ ಇದ್ದ ಬಗ್ಗೆ ಅರಿವೇ ಇರಲಿಲ್ಲ. ಆದರೆ, ಇದೀಗ ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ ಕಂಡು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ.

Previous articleಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ !
Next articleಅನಂತ ಪದ್ಮನಾಭ ದೇಗುಲಕ್ಕೆ ದಕ್ಷಿಣ ಕನ್ನಡದ ಮುಖ್ಯ ಅರ್ಚಕರ ನೇಮಕ