ದಿ ಜಮಖಂಡಿ ಅರ್ಬನ್ ಕೋ ಆಪರೇಟಿವ್ಹ್ ಬ್ಯಾಂಕ್ ಲಿಮಿಟೆಡ್, ಜಮಖಂಡಿ ತನ್ನ ನೂತನ ಪ್ರಧಾನ ಕಛೇರಿ, ಎ.ಪಿ.ಎಮ್.ಸಿ ಯಾರ್ಡ್, ಗಿರೀಶ ನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಬ್ಯಾಂಕ್ನ ಪ್ರಕಟಣೆ ಪ್ರಕಾರ, ಮಾನ್ಯ ನಿಬಂಧಕರು, ಸಹಕಾರ ಸಂಘಗಳು, ಬೆಂಗಳೂರು ಇವರ ವಿವಿಧ ಆದೇಶಗಳ ಮೇರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು 27 ಸೆಪ್ಟೆಂಬರ್ ಸಾಯಂಕಾಲ 5 ಗಂಟೆಯವರೆಗೆ ಬ್ಯಾಂಕಿನ ಅಧಿಕೃತ ವೆಬ್ಸೈಟ್ www.thejamkhandiurbanbank.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ: ಬ್ಯಾಂಕ್ ಒಟ್ಟು 45 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅವುಗಳ ವಿವರ
- ಕಿರಿಯ ಸಹಾಯಕರು (14), ವೇತನ ಶ್ರೇಣಿ 33450-62600 ರೂ.
- ಗಣಕಯಂತ್ರ ನಿರ್ವಾಹಕ (4) ವೇತನ ಶ್ರೇಣಿ 33450-62600 ರೂ.
- ಸಿಪಾಯಿ (16) ವೇತನ ಶ್ರೇಣಿ 21400-42000 ರೂ.
- ರಾತ್ರಿ ಕಾವಲುಗಾರರು (8) ವೇತನ ಶ್ರೇಣಿ 21400-42000 ರೂ.
- ವಾಹನ ಚಾಲಕರು (2) ವೇತನ ಶ್ರೇಣಿ 21400-42000 ರೂ.
- ಗನ್ ಮ್ಯಾನ್ (1) ವೇತನ ಶ್ರೇಣಿ 21400-42000 ರೂ.ಗಳು
ವಿದ್ಯಾರ್ಹತೆ: ಕಿರಿಯ ಸಹಾಯಕ ಹುದ್ದೆಗೆ ದ್ವಿತೀಯ ಪಿ.ಯು.ಸಿ ಉತ್ತೀರ್ಣರಾಗಿರಬೇಕು. ಕನ್ನಡವನ್ನು ಓದುವ, ಬರೆಯುವ, ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹಾಗೂ ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ ಜ್ಞಾನ ಕಡ್ಡಾಯ. ಭಾರತದ ಕಾನೂನಿನಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿದ ಮತ್ತು ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಗಣಕಯಂತ್ರ ನಿರ್ವಾಹಕ ಹುದ್ದೆಗೆ ದ್ವಿತೀಯ ಪಿ.ಯು.ಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ನಲ್ಲಿ ಉತ್ತೀರ್ಣರಾಗಿರಬೇಕು. ಇತರ ಹುದ್ದೆಗಳ ವಿದ್ಯಾರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಹತೆ ಇರುವವರು 27 ಸೆಪ್ಟೆಂಬರ್ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.