ಗದಗ Archives - Samyukta Karnataka

ಗದಗಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಗಮನ: ಗಣ್ಯರಿಂದ ಸ್ವಾಗತ
ಗದಗ: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಗೆ ಆಗಮಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಸ್ವಾಗತಿಸಿದರು.

ಶಾಸಕರಾದ ಡಾ. ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹೆಲಿಪ್ಯಾಡ್‌ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರಾದ ಜಾನಕಿ ಎಸ್., ಐಜಿಪಿ ಸಂದೀಪ್ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿತುನ್ ಎಚ್.ಎನ್., ಡಿಸಿಎಫ್ ಸಂತೋಷ ಕುಮಾರ್ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಿಗದಿತ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ಗದಗಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಗಮನ: ಗಣ್ಯರಿಂದ ಸ್ವಾಗತ appeared first on Samyukta Karnataka.

ಬಿಸಿಯೂಟದಲ್ಲಿ ಹಲ್ಲಿ ಪತ್ತೆ: 120ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ!
ಮುಂಡರಗಿ: ತಾಲೂಕಿನ ಬಿಡನಾಳ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಶನಿವಾರ ಬೆಳಗಿನ ಬಿಸಿಯೂಟ ಸೇವಿಸಿದ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡ ಭೀಕರ ಘಟನೆ ನಡೆದಿದೆ.

ಘಟನೆಯ ವಿವರ: ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಪಹಾರಕ್ಕಾಗಿ ಉಪ್ಪಿಟ್ಟು ತಯಾರಿಸಿ ವಿತರಿಸಲಾಗಿತ್ತು. ಅಡುಗೆ ಸಿದ್ಧಪಡಿಸುವ ವೇಳೆ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಪಾತ್ರೆಯೊಳಗೆ ಹಲ್ಲಿ ಬಿದ್ದಿದೆ. ಈ ಆಹಾರ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ತಲೆಸುತ್ತು, ವಾಂತಿ ಹಾಗೂ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಏಕಾಏಕಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಳ್ಳುತ್ತಿದ್ದಂತೆ ಶಾಲಾ ಆವರಣದಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸಮಯೋಚಿತ ಚಿಕಿತ್ಸೆ — ತಪ್ಪಿದ ಭಾರಿ ಅನಾಹುತ: ಬಿಸಿಯೂಟದ ಪಾತ್ರೆಯನ್ನು ಪರಿಶೀಲಿಸಿದಾಗ ಹಲ್ಲಿ ಬಿದ್ದಿರುವುದು ಖಚಿತವಾಯಿತು. ಕೂಡಲೇ ಎಚ್ಚೆತ್ತ ಶಾಲಾ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಪೋಷಕರು ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ವಾಹನಗಳ ಮೂಲಕ ಮುಂಡರಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದ್ದು, ಅದೃಷ್ಟವಶಾತ್ ಯಾವ ಮಗುವಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ನೂರಾರು ಪೋಷಕರು ಆಸ್ಪತ್ರೆಯತ್ತ ಧಾವಿಸಿ ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳ ಪರಿಶೀಲನೆ ಹಾಗೂ ತನಿಖೆ: ಘಟನೆ ನಡೆದ ಬೆನ್ನಲ್ಲೇ ತಾಲೂಕು ಶಿಕ್ಷಣಾಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮುಂಡರಗಿ ಪೊಲೀಸ್ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡುಗೆ ಕೋಣೆ, ಬಳಸಲಾದ ಆಹಾರ ಧಾನ್ಯಗಳ ಸಂಗ್ರಹಣೆ ಹಾಗೂ ನೈರ್ಮಲ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆಹಾಕಿದರು.

ಪೋಷಕರ ಆಕ್ರೋಶ ಹಾಗೂ ಒತ್ತಾಯ: ಸರ್ಕಾರಿ ಶಾಲೆಗಳಲ್ಲಿ ನೀಡಲಾಗುವ ಬಿಸಿಯೂಟದ ನೈರ್ಮಲ್ಯ ಮತ್ತು ಗುಣಮಟ್ಟದ ಕುರಿತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದ ಅಡುಗೆ ಸಿಬ್ಬಂದಿ ಹಾಗೂ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪೋಷಕರು ಆಗ್ರಹಿಸಿದ್ದಾರೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಬಿಸಿಯೂಟದಲ್ಲಿ ಹಲ್ಲಿ ಪತ್ತೆ: 120ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ! appeared first on Samyukta Karnataka.

ಮಾನಸಿಕ ಅಸ್ವಸ್ಥೆ ಅತ್ಯಾಚಾರ: ಏಳು ಜನರ ಬಂಧನ
ಗದಗ: ಮಾನಸಿಕ ಅಸ್ವಸ್ಥ ಯುವತಿ ಮೇಲೆ ನಾಲ್ವರು ದುರುಳರು ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಅಮಾನವೀಯ ಘಟನೆಯೊಂದು ಗದುಗಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಎಸಗಿದ ಮತ್ತು ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ಏಳು ಜನರನ್ನು ಗದಗ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗದಗ ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬ್ಬೀರಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಅತ್ಯಾಚಾರ ನಡೆಸಿದ ಆರೋಪಿಗಳು. ಯುವತಿ ಮೂರು ತಿಂಗಳ ಗರ್ಭಿಣಿಯಾದಾಗ ಈ ನೀಚ ಕೃತ್ಯ ಪೋಷಕರಿಗೆ ತಿಳಿದಿದೆ.

ಈ ವೇಳೆ ಆರೋಪಿಗಳು ಬಡ ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ದೂರು ನೀಡದಂತೆ ಜೀವಬೆದರಿಕೆ ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ಡಾ. ನಾಗರಾಜ್ ಕಮತರ, ಶಿಗ್ಲಿ ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ್ ಎಂಬುವವರ ನೆರವಿನಿಂದ 10 ಗರ್ಭಪಾತ ಮಾತ್ರೆ ನೀಡಿ ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಹೊರಟ್ಟಿ ರಾಜೀನಾಮೆಗೂ ಮುನ್ನ ಏನಾಯ್ತು?

The post ಮಾನಸಿಕ ಅಸ್ವಸ್ಥೆ ಅತ್ಯಾಚಾರ: ಏಳು ಜನರ ಬಂಧನ appeared first on Samyukta Karnataka.

ಗದುಗಿನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಲಾಲ್‌ಬಹದ್ದೂರ್ ಶಾಸ್ತ್ರಿ ಪುತ್ರ
ಹುಬ್ಬಳ್ಳಿ: ಮಾಜಿ ಕೇಂದ್ರ ಸಚಿವ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಿಂದಿ ವಿಭಾಗದ ಅಧ್ಯಕ್ಷ ಅನಿಲ್ ಶಾಸ್ತ್ರಿ ಅವರು ಆ. 15 ಮತ್ತು 16 ರಂದು ಧಾರವಾಡ ಮತ್ತು ಗದಗ ಜಿಲ್ಲಾ ಪ್ರವಾಸ ಕೈಗೊಳ್ಳುವರು.

ಆ. 15 ರಂದು ಬೆಳಿಗ್ಗೆ 7.45ಕ್ಕೆ ಗದಗಿನ ಗದಗ ಕೋ ಆಪರೇಟಿವ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಧ್ವಜಾರೋಹಣ ಮಾಡುವರು. ಬೆಳಿಗ್ಗೆ 9.15 ಕ್ಕೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಗದಗ ಕೋ ಆಪರೇಟಿವ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸುವರು. ಸಂಜೆ 4.30 ಕ್ಕೆ ಗದಗ ಕೋ ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿ ಸಭಾಂಗಣದಲ್ಲಿ ಎಚ್.ಕೆ. ಪಾಟೀಲ ಸೇವಾ ತಂಡದಿಂದ 11 ಸಾವಿರ ಕುಟುಂಬಗಳ ದತ್ತು ಸ್ವೀಕಾರ ಸಮಾರಂಭ ಹಾಗೂ ಅಂಗಾಗ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಆಗಸ್ಟ 16 ರಂದು ಬೆಳಿಗ್ಗೆ 10 ಗಂಟೆಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವರು. ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ದೆಹಲಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಶ್ರೀನಿವಾಸ ಮಾನೆಗೆ ಗೃಹ ಮಂಡಳಿ ಅಧ್ಯಕ್ಷ ಪಟ್ಟ

The post ಗದುಗಿನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಲಾಲ್‌ಬಹದ್ದೂರ್ ಶಾಸ್ತ್ರಿ ಪುತ್ರ appeared first on Samyukta Karnataka.

ಹಿರಿಯ ಕಿರುತೆರೆ ಕಲಾವಿದ ವಿಜಯಕುಮಾರ ಜಿತೂರಿ ನಿಧನ
ಗದಗ: ಕಿರುತೆರೆ, ಹಿರಿತೆರೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಹಿರಿಯ ಕಲಾವಿದ, ನಟ ಹಾಗೂ ಗಾಯಕ ವಿಜಯಕುಮಾರ ಜಿತೂರಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಲಾ ಕ್ಷೇತ್ರದ ಗಣ್ಯರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯಕುಮಾರ ಜಿತೂರಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದೊಂದಿಗೆ ನಂಟು ಹೊಂದಿದ್ದರು. ಅಭಿನಯದ ಜೊತೆಗೆ ರಂಗಗೀತೆಗಳ ಗಾಯನದಲ್ಲಿಯೂ ಅವರು ಗುರುತಿಸಿಕೊಂಡಿದ್ದರು. ಗದಗ ಹಾಗೂ ಬೆಂಗಳೂರಿನ ವಿವಿಧ ರಂಗ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದ ಅವರು, ರಂಗಭೂಮಿಯಿಂದ ಕಿರುತೆರೆ ಮತ್ತು ಹಿರಿತೆರೆಯತ್ತ ತಮ್ಮ ಕಲಾ ಪಯಣವನ್ನು ವಿಸ್ತರಿಸಿದ್ದರು.

2025ರಲ್ಲಿ ಗದಗದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ಸಂದರ್ಭದಲ್ಲಿ ತಮ್ಮ ರಂಗಭೂಮಿ ಪಯಣ ಹಾಗೂ ಕಲಾ ಅನುಭವಗಳ ಕುರಿತು ಅವರು ಮಾತನಾಡಿದ್ದರು.

ಕಿರುತೆರೆಯಲ್ಲಿ ವಿಜಯಕುಮಾರ ಜಿತೂರಿ ಅವರು ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ವಿಶೇಷವಾಗಿ ‘ಮಿಲನ’ ಹಾಗೂ ‘ಮಂಗಳಗೌರಿ ಮದುವೆ’ ಧಾರಾವಾಹಿಗಳಲ್ಲಿನ ಅವರ ಪಾತ್ರಗಳು ಪ್ರೇಕ್ಷಕರಿಗೆ ಪರಿಚಿತವಾಗಿದ್ದವು. ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಅವರು ಕಾನ್‌ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳೊಂದಿಗೆ ಹಲವು ದೃಶ್ಯಗಳಲ್ಲಿ ಅಭಿನಯಿಸುವ ಮೂಲಕ ಅವರು ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಗದಗದ ಸ್ಥಳೀಯ ರಂಗಭೂಮಿ ವಲಯದಲ್ಲಿ ಸಕ್ರಿಯರಾಗಿದ್ದ ವಿಜಯಕುಮಾರ ಜಿತೂರಿ ಅವರು ಅಭಿನಯದ ಜೊತೆಗೆ ಗಾಯನದ ಮೂಲಕವೂ ತಮ್ಮದೇ ಆದ ಗುರುತು ಮೂಡಿಸಿದ್ದರು. 2025ರಲ್ಲಿ ಅವರಿಗೆ ನೀಡಲಾಗಿದ್ದ ‘ಚಿನ್ಮಯ ಕಲಾಶ್ರೀ’ ಗೌರವವೂ ಅವರ ದೀರ್ಘಕಾಲದ ರಂಗಸೇವೆಗೆ ದೊರೆತ ಮಾನ್ಯತೆಗೆ ಸಾಕ್ಷಿಯಾಗಿದೆ.

ಒಬ್ಬ ಕಲಾವಿದನಾಗಿ ಹಲವು ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ, ರಂಗಭೂಮಿಯೊಂದಿಗೆ ಕೊನೆಯವರೆಗೂ ನಂಟು ಉಳಿಸಿಕೊಂಡಿದ್ದ ವಿಜಯಕುಮಾರ ಜಿತೂರಿ ಅವರ ನಿಧನ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕಲಾ ಸೇವೆ ಹಾಗೂ ಅವರು ಅಭಿನಯಿಸಿದ ಪಾತ್ರಗಳು ಅಭಿಮಾನಿಗಳ ನೆನಪಿನಲ್ಲಿ ಉಳಿಯಲಿವೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಹಿರಿಯ ಕಿರುತೆರೆ ಕಲಾವಿದ ವಿಜಯಕುಮಾರ ಜಿತೂರಿ ನಿಧನ appeared first on Samyukta Karnataka.

ಬಿತ್ತನೆ ಮಾಡದ ರೈತರಿಗೂ ಪರಿಹಾರಕ್ಕೆ ಚಿಂತನೆ
ಗದಗ: ಬೆಳೆ ವಿಮೆ ಕಂತು ಪಾವತಿಸಿರುವ ರೈತರು ಸೇರಿದಂತೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಪರಿಹಾರ ನೀಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಮಳೆ ಕೊರತೆಯಿಂದಾಗಿ ಸುಮಾರು ಶೇ. 10ರಷ್ಟು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆಯಾಗದ ಪ್ರದೇಶದ ರೈತರಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬಹುದು ಎಂಬುದರ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ಶನಿವಾರ ಶಿರಹಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.

ಬರ ಘೋಷಣೆಗೆ ಸಕಾಲ ಅಲ್ಲ: ತಕ್ಷಣವೇ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಬರ ಘೋಷಣೆಗೆ ಇನ್ನೂ ಸುಮಾರು 15 ದಿನಗಳ ಕಾಲಾವಕಾಶ ಬೇಕಾಗುತ್ತದೆಯೆಂದು ಹೇಳಿದರು. ರಾಜ್ಯದ 171 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ. ಮಳೆ ಪ್ರಮಾಣ, ಬೆಳೆ ಪರಿಸ್ಥಿತಿ, ಬಿತ್ತನೆ ಪ್ರಮಾಣ, ಬೆಳೆ ಹಾನಿ ಸೇರಿದಂತೆ ವಿವಿಧ ಅಂಶಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ಬಳಿಕ ಬರ ಘೋಷಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ತಾಯಿ ನೆನೆದು ಭಾವುಕರಾದ ರೇವಣ್ಣ

The post ಬಿತ್ತನೆ ಮಾಡದ ರೈತರಿಗೂ ಪರಿಹಾರಕ್ಕೆ ಚಿಂತನೆ appeared first on Samyukta Karnataka.

ಬರ ಪರಿಸ್ಥಿತಿ ಸಭೆಯಲ್ಲಿ ಕಣ್ಣೀರಿಟ್ಟ ಅಧಿಕಾರಿ!
ಗದಗ: ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಳಿದ ಪ್ರಶ್ನೆಗಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅಸಮರ್ಪಕ ಉತ್ತರ ನೀಡಿದ್ದಕ್ಕಾಗಿ ಸಚಿವ ರಾಯರೆಡ್ಡಿ ‘ಇನ್‌ಎಫಿಷಿಯಂಟ್ ಆಫೀಸರ್’ ಎಂದು ಹಿಗ್ಗಾ ಮುಗ್ಗಾ ಝಾಡಿಸಿ ಅಧಿಕಾರಿ ನೀರಿಳಿಸಿದ ಘಟನೆ ಜರುಗಿತು.

ಸಚಿವ ಬಸವರಾಜ ರಾಯರೆಡ್ಡಿ, ನೂರಾರು ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ನೀವು ಅಸಮರ್ಥ ಅಧಿಕಾರಿಯಾಗಿದ್ದೀರಿ. ನಿಮಗೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದ್ದರೆ ಬೇರೆ ಕಡೆ ವರ್ಗಾವಣೆ ಪಡೆದುಕೊಂಡು ಹೋಗಿ ಬಿಡಮ್ಮ. ನನಗೆ ಇಂತಹ ಅಸಮರ್ಥ ಅಧಿಕಾರಿಗಳಿಂದ ಉತ್ತಮ ಕೆಲಸ ನಿರ್ವಹಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದಂತೆ ಅಧಿಕಾರಿ ತಲೆತಗ್ಗಿಸಿ ಕುಳಿತು ಕಣ್ಣೀರಿಟ್ಟರು.

ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಚಿವರಿಗೆ ಸಲ್ಲಿಸಿದ್ದ ಮಾಹಿತಿ ಪುಸ್ತಕದಲ್ಲಿನ ಅಂಕಿ-ಅಂಶಗಳು ಹಾಗೂ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬಸವರಾಜ ರಾಯರೆಡ್ಡಿ ಗರಂ ಆದರು. ಬೆಳೆ ಹಾನಿ, ಬಿತ್ತನೆ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ನೀಡಲಾದ ಮಾಹಿತಿಯಲ್ಲಿ ಗೊಂದಲ ಇರುವುದನ್ನು ಸಚಿವರು ಪ್ರಶ್ನಿಸಿದರು.

ಸಭೆಯಲ್ಲಿ ಸಚಿವ ರಾಯರೆಡ್ಡಿ ವಿವಿಧ ಬೆಳೆಗಳ ಸ್ಥಿತಿಗತಿ ಕುರಿತು ಪ್ರಶ್ನೆಗಳನ್ನು ಕೇಳಿದಾಗ ಕೃಷಿ ಅಧಿಕಾರಿ ಚೇತನಾ ಪಾಟೀಲ ಸಮರ್ಪಕ ಮಾಹಿತಿ ನೀಡಲು ಪರದಾಡಿದರು.

ಜನಸೇವೆಗೆ ಮಂತ್ರಿಸ್ಥಾನವೇ ಬೇಕೆಂದೇನೂ ಇಲ್ಲ: ಎಚ್‌.ಕೆ. ಪಾಟೀಲ

The post ಬರ ಪರಿಸ್ಥಿತಿ ಸಭೆಯಲ್ಲಿ ಕಣ್ಣೀರಿಟ್ಟ ಅಧಿಕಾರಿ! appeared first on Samyukta Karnataka.

ಜನಸೇವೆಗೆ ಮಂತ್ರಿಸ್ಥಾನವೇ ಬೇಕೆಂದೇನೂ ಇಲ್ಲ: ಎಚ್‌.ಕೆ. ಪಾಟೀಲ
ಗದಗ: ಸೇವಾ ಕ್ಷೇತ್ರ ಅತ್ಯಂತ ವಿಶಾಲ. ಅದಕ್ಕೆ ಮಿತಿ ಇಲ್ಲ, ಅದಕ್ಕಾಗಿ ಮಂತ್ರಿಸ್ಥಾನವೇ ಬೇಕೆಂದೇನೂ ಇಲ್ಲ. ಇತರೆಲ್ಲ ಅವಕಾಶ ಬಳಸಿಕೊಂಡು ದೇಶ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದು ಶಾಸಕ ಎಚ್.ಕೆ. ಪಾಟೀಲ ಕಾರ್ಯಕರ್ತರಿಗೆ ಹೇಳಿದರು.

ಸಂಪುಟ ವಿಸ್ತರಣೆ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಎಚ್.ಕೆ. ಪಾಟೀಲ ಅವರನ್ನು ಕಾರ್ಯಕರ್ತರು ಭಾವನಾತ್ಮಕವಾಗಿ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದ ಅವರು, ಈ ಸ್ವಾಗತ ನನಗೆ ನೈತಿಕ ಧೈರ್ಯ ಮತ್ತು ಸ್ಥೈರ್ಯ ತಂದುಕೊಟ್ಟಿದೆ ಎಂದು ಭಾವಪರವಶರಾಗಿ ಹೇಳಿದರು.

ರಾಜಕೀಯ ಕಾರ್ಯಕರ್ತರನ್ನು ಸೇವಾ ಕ್ಷೇತ್ರಕ್ಕೆ ತೊಡಗಿಸಿದ ಮೊದಲ ಕ್ಷೇತ್ರ ಗದಗ. ಸೇವೆ ಮೂಲಕ ಜನರನ್ನು ತಲುಪಿ 100 ದಿನದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಲು ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡೋಣ. ನನ್ನ ಮೇಲೆ ಪ್ರೀತಿ ಅಭಿಮಾನ ಗೌರವ ಇಟ್ಟಿರುವ ತಾವು ನನ್ನ ಜೊತೆಗೂಡಿ ಸನ್ಮಾರ್ಗದಲ್ಲಿ ನಡೆಯೋಣ. ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೆ, ಜನಸೇವೆಯಲ್ಲಿ ಕಾರ್ಯತತ್ಪರಾಗೋಣ ಎಂದರು.

ತಮ್ಮನ್ನು ಬೆಂಬಲಿಸಿ ಗದಗ-ಬೆಟಗೇರಿ ನಗರಸಭೆ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆದುಕೊಳ್ಳಲು ಮನವಿ ಮಾಡಿದರು. ವಿಧಾನಸಭಾ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಅಭಿನಂದಿಸಿದರು.

ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಕಾರ್ಯಕರ್ತರು ಧೈರ್ಯಗೆಡದೆ ಹೆಚ್ಚು ಕೆಲಸ ಮಾಡಿ. ಕಾಂಗ್ರೆಸ್ಸಿನ ತತ್ವ ಸಿದ್ಧಾಂತಗಳ ಮೂಲಕ ಜನಸೇವೆಗೆ ಮುಂದಾಗಿ. ಓರ್ವ ನಾಯಕ ಹೇಗಿರಬೇಕು ಎಂಬುದನ್ನು ತೋರಿಸೋಣ ಎಂದು ಧೈರ್ಯ ತುಂಬಿದರು.

ಸಚಿವನಾಗಿದ್ದೇನೆ, ಈಗೇನು ಮಾಡುತ್ತೀಯಪ್ಪಾ ಜಗದ್ಗುರು?

The post ಜನಸೇವೆಗೆ ಮಂತ್ರಿಸ್ಥಾನವೇ ಬೇಕೆಂದೇನೂ ಇಲ್ಲ: ಎಚ್‌.ಕೆ. ಪಾಟೀಲ appeared first on Samyukta Karnataka.

ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ
ಗದಗ: ಹಿರಿಯ ಕಾಂಗ್ರೆಸ್ ಧುರೀಣ, ಶಾಸಕ ಡಾ. ಎಚ್.ಕೆ. ಪಾಟೀಲ್‌ರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದನ್ನು ವಿರೋಧಿಸಿ ಗದಗ ಜಿಲ್ಲೆಗೆ ಆಗಮಿಸುವ ಯಾವುದೇ ಸಚಿವರಿಗೆ ಕ್ಷೌರಸೇವೆ ನೀಡದಿರಲು ಜಿಲ್ಲಾ ಸವಿತಾ ಸಮಾಜ ನಿರ್ಧರಿಸಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಗೌರವಪೂರ್ವಕವಾಗಿ ಸ್ವಾಗತ ಕೋರಲಾಗುವುದು. ಸವಿತಾ ಸಮಾಜದ ಅಭಿವೃದ್ಧಿ ಸೇರಿದಂತೆ ಯಾವುದೇ ಮನವಿ ಸಲ್ಲಿಸುವುದಿಲ್ಲ. ಸಮಾಜದ ಸಮಸ್ಯೆಗಳ ಪರಿಹಾರವನ್ನು ಎಚ್.ಕೆ. ಪಾಟೀಲ್ ಅವರ ಮೂಲಕವೇ ಪಡೆಯುವುದಾಗಿ ಜಿಲ್ಲಾ ಸವಿತಾ ಸಮಾಜದ ತುರ್ತು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆಯೆಂದು ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ತಿಳಿಸಿದರು.

ಎಚ್.ಕೆ. ಪಾಟೀಲ ರೈತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಪರ ನಿರಂತರವಾಗಿ ಧ್ವನಿಯೆತ್ತಿರುವ ನಾಯಕರು. ಅವರನ್ನು ಕಡೆಗಣಿಸಿರುವುದು ಶ್ರಮಿಕ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಂತಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಅಸಮಾಧಾನ ಎರಡು ದಿನ, ಬಳಿಕ ಎಲ್ಲವೂ ಸರಿಹೋಗುತ್ತೆ

The post ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ appeared first on Samyukta Karnataka.

H. K ಪಾಟೀಲರಿಗೆ ತಪ್ಪಿದ ಸಚಿವ ಸ್ಥಾನ : ನಗರಸಭೆ ಸದಸ್ಯರ ಸಾಮೂಹಿಕ ರಾಜೀನಾಮೆ
ಗದಗ: ರಾಜ್ಯ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಗದಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಪಕ್ಷದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ಹಾಗೂ ಮುಖಂಡರು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ರಾಜಕೀಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಡಾ. ಎಚ್.ಕೆ. ಪಾಟೀಲ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವುದು ಗದಗ ಜಿಲ್ಲೆಯ ಜನತೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

22 ನಗರಸಭೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ : ಪ್ರತಿಭಟನೆಯ ಪ್ರಮುಖ ಬೆಳವಣಿಗೆಯಾಗಿ ಗದಗ ನಗರಸಭೆಯ 22 ಮಂದಿ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸದಸ್ಯರು, ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯರ ಈ ನಡೆ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

ಪಕ್ಷದ ನಾಯಕತ್ವಕ್ಕೆ ಮನವಿ : ಪ್ರತಿಭಟನಾಕಾರರು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವವು ಗದಗ ಜಿಲ್ಲೆಯ ಭಾವನೆಗಳನ್ನು ಗೌರವಿಸಿ ಡಾ. ಎಚ್.ಕೆ. ಪಾಟೀಲ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಡಾ. ಎಚ್.ಕೆ. ಪಾಟೀಲ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಸಂಘಟನೆ ಬಲಪಡಿಸುವಲ್ಲಿ ಹಾಗೂ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರ ಅನುಭವವನ್ನು ಸಚಿವ ಸಂಪುಟದಲ್ಲಿ ಬಳಸಿಕೊಳ್ಳಬೇಕಿತ್ತು ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು.

ರಾಜಕೀಯ ಚರ್ಚೆಗೆ ಕಾರಣವಾದ ಬೆಳವಣಿಗೆ : ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನ ಕೆಲವು ಜಿಲ್ಲೆಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಗದಗದಲ್ಲಿನ ಈ ಪ್ರತಿಭಟನೆ ಮತ್ತು ನಗರಸಭೆ ಸದಸ್ಯರ ಸಾಮೂಹಿಕ ರಾಜೀನಾಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸದ್ಯ ಈ ರಾಜೀನಾಮೆಗಳನ್ನು ಜಿಲ್ಲಾಡಳಿತ ಸ್ವೀಕರಿಸುವ ಪ್ರಕ್ರಿಯೆ ಹಾಗೂ ಪಕ್ಷದ ನಾಯಕತ್ವದ ಮುಂದಿನ ನಿರ್ಧಾರದತ್ತ ಎಲ್ಲರ ಗಮನ ನೆಟ್ಟಿದೆ.

The post H. K ಪಾಟೀಲರಿಗೆ ತಪ್ಪಿದ ಸಚಿವ ಸ್ಥಾನ : ನಗರಸಭೆ ಸದಸ್ಯರ ಸಾಮೂಹಿಕ ರಾಜೀನಾಮೆ appeared first on Samyukta Karnataka.