#Dharwad Archives - Samyukta Karnataka

ವೈದ್ಯ ದಂಪತಿಯ ಕೌಟುಂಬಿಕ ಕಲಹ: ಪತ್ನಿಯಿಂದಲೇ ಪತಿ ಮರ್ಡರ್
ಧಾರವಾಡ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿಯ ಬಾರಾಕೋಟ್ರಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಘಟನೆಯಲ್ಲಿ 8 ವರ್ಷದ ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಕಿರಣ ಹೊನ್ನಣ್ಣವರ (45) ಕೊಲೆಯಾದವರು. 8 ವರ್ಷದ ನೇಹಿತ್ ಚಾಕು ಇರಿತದಿಂದ ಗಾಯಗೊಂಡಿದ್ದಾನೆ. ಈ ಇಬ್ಬರ ಮೇಲೆ ಪತ್ನಿ ಡಾ. ಪ್ರಿಯಾಂಕಾ ಹಲ್ಲೆ ಮಾಡಿದ್ದಾಳೆ ಎಂದು ಡಾ. ಕಿರಣ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಮಂಗಳವಾರ ರಾತ್ರಿಯಿಂದಲೇ ಡಾ. ಕಿರಣ ಅವರ ಫೋನ್‌ಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಕರೆ ಮಾಡಿದಾಗ, ಪತ್ನಿ ಪ್ರಿಯಾಂಕಾ ಕರೆ ಸ್ವೀಕರಿಸಿ ತನ್ನ ಪತಿ ಹೊರಹೋಗಿದ್ದಾರೆ, ಕೆಲಸದ ಮೇಲೆ ಇದ್ದಾರೆ ಎಂದೆಲ್ಲ ಹೇಳಿದ್ದಾಳೆ. ಇದಾದ ಬಳಿಕ ಬುಧವಾರ ಬೆಳಗ್ಗೆ ಕರೆ ಮಾಡಿದರೂ ಇದೇ ರೀತಿಯ ಉತ್ತರ ಕೇಳಿಬಂದಿದೆ. ಅಕ್ಕಪಕ್ಕದ ಮನೆಯವರು ವಿಚಾರಿಸಿದಾಗಲೂ ಮನೆಯಲ್ಲಿ ತಾನೊಬ್ಬಳೆ ಇರುವುದಾಗಿ ತಿಳಿಸಿದ್ದಾಳೆ.

ಆದರೆ, ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದ ಡಾ. ಕಿರಣ ಎಲ್ಲಿಯೂ ಹೊರಹೋಗಿಲ್ಲ ಎನ್ನುವುದು ಸ್ಥಳೀಯರ ಮಾತು. ರಾತ್ರಿಯೇ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಪತ್ನಿಯೇ ಚಾಕು ಇರಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಬುದ್ಧಿಮಾಂದ್ಯವಿದ್ದ 8 ವರ್ಷದ ಮಗು ನೇಹಿತ್ ಮೇಲೂ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಪತಿ ಒಂದು ಬೆಡ್‌ರೂಮ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರೆ, ಇನ್ನೊಂದು ಬೆಡ್‌ರೂಮ್‌ನಲ್ಲಿ ಮಗು ನೇಹಿತ್ ಒದ್ದಾಡಿದ್ದಾನೆ. ನಿರಂತರ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಡಾ. ಕಿರಣ ಅವರ ಕುಟುಂಬಸ್ಥರು ಊರಿನಿಂದ ಬಂದು ವಿಚಾರಿಸಿದಾಗ ಡಾ. ಕಿರಣ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮಗ ನೇಹಿತ್‌ನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಠಾಣೆ ಪೊಲೀಸರು ಪ್ರಿಯಾಂಕಾಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ಡಾ. ಕಿರಣ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಳಪತಿ ವಿಜಯ್ ʻಜನ ನಾಯಗನ್ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌!

The post ವೈದ್ಯ ದಂಪತಿಯ ಕೌಟುಂಬಿಕ ಕಲಹ: ಪತ್ನಿಯಿಂದಲೇ ಪತಿ ಮರ್ಡರ್ appeared first on Samyukta Karnataka.

18ರಂದು ಧಾರವಾಡ ಐಐಟಿ ಘಟಿಕೋತ್ಸವ: ಸುಧಾ ಮೂರ್ತಿಗೆ ಗೌರವ ಡಾಕ್ಟರೇಟ್
ಧಾರವಾಡ: ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ 7ನೇ ಘಟಿಕೋತ್ಸವ ಜು. 18ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ ಐಐಟಿಯ ದಶಮಾನೋತ್ಸವದ ನಿಮಿತ್ತ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಸಭಾ ಸದಸ್ಯೆ, ಪದ್ಮಭೂಷಣ ಸುಧಾ ಮೂರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ದೆಹಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಾಧ್ಯಾಪಕ ಭೀಮ್ ಸಿಂಗ್, ಟಾಟಾ ಪವರ್ ರಿನ್ಯೂವೆಬಲ್ ಮೈಕ್ರೋಗ್ರಿಡ್ ಸಿಇಓ ಮನೋಜ ಗುಪ್ತಾ, ಪ್ಯಾನ್ ಐಐಟಿ ಪೂರ್ವ ಛಾತ್ರಗಣ ಅಧ್ಯಕ್ಷ ಪ್ರಭಾತ ಕುಮಾರ, ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶರದ್ ಕುಮಾರ್ ಸರಾಫ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ಬಿಟೆಕ್ 207, ಬಿ.ಎಸ್ 13, ಎಮ್. ಟೆಕ್ 56, ಎಂ.ಎಸ್ 12, ಪಿ.ಎಚ್.ಡಿ 24 ಪಿಜಿ ಡಿಪ್ಲೊಮಾ 1 ಸೇರಿ ಒಟ್ಟು 313 ಐಐಟಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸುಧಾಮೂರ್ತಿಯವರು ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಬೆಂಗಳೂರಿನ ಐಐಎಸ್‌ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಧಾರವಾಡ-ಹುಬ್ಬಳ್ಳಿಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಸುಧಾ ಮೂರ್ತಿಗೆ ತವರಿನಲ್ಲಿ ಗೌರವ ಡಾಕ್ಟರೇಟ್ ನೀಡುತ್ತಿರುವುದು ವಿಶೇಷ ಎಂದರು.

ದಳಪತಿ ವಿಜಯ್ ʻಜನ ನಾಯಗನ್ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌!

The post 18ರಂದು ಧಾರವಾಡ ಐಐಟಿ ಘಟಿಕೋತ್ಸವ: ಸುಧಾ ಮೂರ್ತಿಗೆ ಗೌರವ ಡಾಕ್ಟರೇಟ್ appeared first on Samyukta Karnataka.

ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರಲ್ಲ
ಹುಬ್ಬಳ್ಳಿ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಪೌರತ್ವ, ನಿವಾಸ ಸೇರಿದಂತೆ ಇಂತಹ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನೂ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೇ ಇದೆ. ಈ ಹಿಂದೆ ರಾಜ್ಯ ಸರ್ಕಾರಗಳು ಜಾತಿ ಸಮೀಕ್ಷೆ ನಡೆಸಿದ್ದರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಅದೇ ರೀತಿ ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದೂ ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದರೆ ಅಂತಹ ಆದೇಶ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಸಮಸ್ಯೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸೆಗೆ ಅವಕಾಶ ನೀಡಿದ ಪರಿಣಾಮ ಅನೇಕರು ದೇಶದೊಳಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರು ಇದ್ದರೆ ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ರಾಜ್ಯದ ಗೃಹ ಇಲಾಖೆಯ ಜವಾಬ್ದಾರಿಯಾಗಿದೆ. ರಾಜ್ಯ ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸದ ಕಾರಣ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಮತಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಪ್ರಯತ್ನ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು, “ಬಾಂಗ್ಲಾದೇಶಿ ನಾಗರಿಕರಿಗೆ ಪೌರತ್ವ ನೀಡಿಲ್ಲ” ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಮೌಖಿಕ ಹೇಳಿಕೆ ನೀಡುವುದರಿಂದ ಸಾಲದು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವರಿಗೆ ಅಧಿಕೃತ ಪತ್ರ ಬರೆದು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಲಿಖಿತ ರೂಪದಲ್ಲಿ ತಿಳಿಸಿದರೆ ಮಾತ್ರ ಅದನ್ನು ನಂಬಲು ಸಾಧ್ಯ ಎಂದು ಹೇಳಿದರು.

‘ಬ್ರಾಹ್ಮಣಿ ಸ್ಟೀಲ್ಸ್’ಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಬರಲ್ಲ

The post ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರಲ್ಲ appeared first on Samyukta Karnataka.

HDMCಯಲ್ಲಿ ಕಮಲ ಮುಡಿಗೆ ಮೇಯರ್-ಉಪಮೇಯರ್ ಪಟ್ಟ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (HDMC) 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ದುರ್ಗಮ್ಮ ಬಿಜವಾಡ ಅವರು ನೂತನ ಮೇಯರ್ ಆಗಿ ಹಾಗೂ ರತ್ನಾಬಾಯಿ ನಾಝರೆ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಎಸ್‌ಸಿ ಮಹಿಳೆ ಮೀಸಲಾಗಿದ್ದರೆ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 69ರ ಸದಸ್ಯೆ ದುರ್ಗಮ್ಮ ಬಿಜವಾಡ ಸ್ಪರ್ಧಿಸಿದ್ದರೆ, ಉಪಮೇಯರ್ ಸ್ಥಾನಕ್ಕೆ ಧಾರವಾಡದ ವಾರ್ಡ್ ಸಂಖ್ಯೆ 9ರ ಸದಸ್ಯೆ ರತ್ನಾಬಾಯಿ ನಾಝರೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ

ಇನ್ನೊಂದೆಡೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ಸಂಖ್ಯೆ 20ರ ಕವಿತಾ ಕಬ್ಬೇರ್ ಮೇಯರ್ ಸ್ಥಾನಕ್ಕೆ ಹಾಗೂ ವಾರ್ಡ್ ಸಂಖ್ಯೆ 6ರ ದಿಲ್ಶಾದ್ ಬೇಗಂ ನದಾಫ್ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು.

50 ಮತಗಳೊಂದಿಗೆ ಬಿಜೆಪಿ ಅಭ್ಯರ್ಥಿಗಳ ಗೆಲುವು : ಮತದಾನದ ಬಳಿಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ದುರ್ಗಮ್ಮ ಬಿಜವಾಡ ಹಾಗೂ ರತ್ನಾಬಾಯಿ ನಾಝರೆ ತಲಾ 50 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ 35 ಮತಗಳು ಲಭಿಸಿದರೆ, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಹಿದಾ ಖಾನಂ ಕಿತ್ತೂರು ಅವರಿಗೆ 3 ಮತಗಳು ದೊರಕಿದವು.

ಇದನ್ನೂ ಓದಿ: ಮೀಸಲಾತಿಗೆ ಜಾತಿಗಿಂತ ಆರ್ಥಿಕ ಸ್ಥಿತಿ ಮುಖ್ಯ: ಶ್ರೀಶೈಲ ಜಗದ್ಗುರುಗಳು

ಬಿಜೆಪಿ ನಾಯಕರ ಬೆಂಬಲ : ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಹಾಗೂ ಲಿಂಗರಾಜ ಪಾಟೀಲ್ ಬೆಂಬಲ ಸೂಚಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಉಡುಪಿ: ₹70 ಲಕ್ಷ ವಂಚನೆ, ಜೀವ ಬೆದರಿಕೆ ಹಾಕಿದ್ದ ಲೇಡಿ ಬಂಧನ

ಅಧಿಕೃತ ಘೋಷಣೆ, ಬಿಜೆಪಿ ಸಂಭ್ರಮ : ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು. ಫಲಿತಾಂಶ ಹೊರಬಿದ್ದ ಕೂಡಲೇ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ದುರ್ಗಮ್ಮ ಬಿಜವಾಡ ರಾಜಕೀಯ ಪಯಣ : ದುರ್ಗಮ್ಮ ಬಿಜವಾಡ ಅವರು ಮೊದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಾಲಿಕೆಯ 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಇದೀಗ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಬದುಕಿನಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಾಗಾಟಕ್ಕೆ ಬ್ರೇಕ್: ₹97 ಸಾವಿರ ಮೌಲ್ಯದ ಪಡಿತರ ಅಕ್ಕಿ ಜಪ್ತಿ

ನೂತನ ಮೇಯರ್ ಹಾಗೂ ಉಪಮೇಯರ್ ನಗರಾಭಿವೃದ್ಧಿ, ಮೂಲಸೌಕರ್ಯ, ಸ್ವಚ್ಛತೆ, ಕುಡಿಯುವ ನೀರು ಹಾಗೂ ನಾಗರಿಕ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.

ಸಾಮೂಹಿಕ ವಿತರಣೆ ಸರಿಯಲ್ಲ: SIR ಪ್ರಕ್ರಿಯೆ ವಿರುದ್ಧ ಜೋಶಿ ಆಕ್ಷೇಪ

The post HDMCಯಲ್ಲಿ ಕಮಲ ಮುಡಿಗೆ ಮೇಯರ್-ಉಪಮೇಯರ್ ಪಟ್ಟ! appeared first on Samyukta Karnataka.

ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!
ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಹು-ಧಾ ಮಹಾನಗರದ ಮೇಯರ್, ಉಪ ಮೇಯರ್ ಆಡಳಿತಾವಧಿ ಇಂದಿಗೆ ಕೊನೆಗೊಳ್ಳಲಿದ್ದು, 25ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಜು. 4ರಂದು ಬೆಳಗ್ಗೆ 9 ಗಂಟೆಗೆ ಮುಹೂರ್ತ ಫಿಕ್ಸ್ ಆಗಿದೆ.

ನೂತನ ಮೇಯರ್, ಉಪ ಮೇಯರ್ ಗಾದಿಗೇರಲು ಮುಸುಕಿನ ಗುದ್ದಾಟ ನಡೆದಿದ್ದು, ಮೇಯರ್ ಸ್ಥಾನಕ್ಕೆ ಚಂದ್ರಿಕಾ ಮೇಸ್ತ್ರಿ, ಉಪಮೇಯರ್ ಸ್ಥಾನಕ್ಕೆ ನೀಲವ್ವ ಅರವಳದ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಈ ಬಾರಿ ಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ ಆಡಳಿತಾರೂಢ ಬಿಜೆಪಿಯಲ್ಲಿ ಯಾವುದೇ ಎಸ್‌ಸಿ ಮಹಿಳಾ ಸದಸ್ಯರು ಇಲ್ಲದಿರುವುದು ತಲೆನೋವಿಗೆ ಕಾರಣವಾಗಿದೆ.

ಮೇಯರ್ ರೇಸ್‌ನಲ್ಲಿರುವ 56ನೇ ವಾರ್ಡ್‌ನ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಇಬ್ಬರೂ ಎಸ್‌ಸಿ ವರ್ಗಕ್ಕೆ ಸೇರಿದವರಾದರೂ ಅವರು ಪಕ್ಷೇತರರು. ಇಬ್ಬರಿಗೂ ಬಿಜೆಪಿ ಟಿಕೆಟ್ ದೊರೆಯದ ಕಾರಣಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಗೆಲುವಿನ ನಂತರ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿಗರೆನ್ನಿಸಿದ್ದಾರೆ. ಹೀಗಾಗಿ ಪಕ್ಷೇತರರಿಗೆ ಮಣೆ ಹಾಕದೇ ಬಿಜೆಪಿಗೆ ವಿಧಿ ಇಲ್ಲದಂತಾಗಿದೆ.

ಹುಬ್ಬಳ್ಳಿಗೆ ಪಕ್ಕಾ: ಧಾರವಾಡದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯರು ಇಲ್ಲದಿರುವುದರಿಂದ ಹಾಗೂ 24ನೇ ಅವಧಿಯಲ್ಲಿ ಮೇಯರ್ ಸ್ಥಾನ ಧಾರವಾಡದ ಜ್ಯೋತಿ ಪಾಟೀಲ ಅವರ ಪಾಲಾಗಿದ್ದ ಕಾರಣ ಈ ಬಾರಿ ಹುಬ್ಬಳ್ಳಿಗೆ ಪಕ್ಕಾ ಆಗಿದೆ. ಅದರಲ್ಲೂ ದುರ್ಗಮ್ಮ ಬಿಜವಾಡ ಅವರು 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಸಾಲಿನ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಅಧಿಕಾರ ಅನುಭವಿಸಿದ್ದರು. ಹೀಗಾಗಿ ಈವರೆಗೂ ಯಾವ ಅಧಿಕಾರವನ್ನೂ ಅನುಭವಿಸದ ಚಂದ್ರಿಕಾ ಮೇಸ್ತಿç ಅವರಿಗೆ ಮೇಯರ್ ಪಟ್ಟ ಕಟ್ಟಬಹುದು ಎಂದು ಬಿಜೆಪಿ ಪಾಳಯದಲ್ಲಿ ಅಂದಾಜಿಸಲಾಗುತ್ತಿದೆ.

ಲೆಕ್ಕಾಚಾರವೇ ಬೇರೆ: ಆದರೆ ನಾಯಕರ ಲೆಕ್ಕಾಚಾರವೇ ಬೇರೆ ಇದೆ. ಈ ಹಿಂದೆ 2012ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಚಂದ್ರಿಕಾ ಮೇಸ್ತ್ರಿ ಹಾಗೂ ಅವರ ಪತಿ ವೆಂಕಟೇಶ ಮೇಸ್ತ್ರಿ ಬಿಜೆಪಿಯನ್ನು ಬಿಟ್ಟು ಕೆಜೆಪಿ ಸೇರಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ವಿರುದ್ಧ ನಡೆದುಕೊಂಡಿದ್ದರು ಎಂಬ ಕಾರಣಕ್ಕೆ ಮೇಯರ್ ಹುದ್ದೆ ಚಂದ್ರಿಕಾ ಮೇಸ್ತ್ರಿ ಅವರ ಕೈ ತಪ್ಪಿ ದುರ್ಗಮ್ಮ ಬಿಜವಾಡ ಅವರಿಗೆ ಒಲಿದರೂ ಅಚ್ಚರಿ ಇಲ್ಲ.

ಇನ್ನು ಉಪಮೇಯರ್ ಸ್ಥಾನಕ್ಕೆ ಚಂದ್ರಕಲಾ ಕೊಟಬಾಗಿ, ಸುನೀತಾ ಮಾಳವದಕರ್, ಅನಿತಾ ಚಳಗೇರಿ ಹಾಗೂ ರತ್ನಾಬಾಯಿ ನಾಜರೆ ಅವರು ಹೆಸರು ರೇಸ್‌ನಲ್ಲಿದ್ದವು. ಆದರೆ ಇದು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಎಲ್ಲ ಮಹಿಳಾ ಸದಸ್ಯರೂ ಒಂದೊಂದು ಮೀಸಲಾತಿ ಹೊಂದಿದ್ದಾರೆ. ಈ ಪೈಕಿ ಯಾರನ್ನಾದರೂ ಉಪಮೇಯರ್ ಸ್ಥಾನಕ್ಕೇರಿಸಿದರೆ ಸಾಮಾನ್ಯ ವರ್ಗಕ್ಕೆ ಅನ್ಯಾಯವಾದಂತಾಗುತ್ತದೆ. ಹೀಗಾಗಿ ಸಾಮಾನ್ಯ ಮಹಿಳೆಗೇ ನೀಡಬೇಕು ಎಂಬುದು ಪಕ್ಷದ ವರಿಷ್ಠರ ಯೋಚನೆಯಾಗಿದೆಯಂತೆ. ವರಿಷ್ಠರ ತೀರ್ಮಾನದಂತೆ ಆಯ್ಕೆ ಪ್ರಕ್ರಿಯೆ ನಡೆದರೆ ಧಾರವಾಡದ ವಾರ್ಡ್ ನಂ. 26ರ ನೀಲವ್ವ ಅರವಳದ ಅವರಿಗೆ ಈ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳು: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. 20ರ ಸದಸ್ಯೆ ಕವಿತಾ ದಾನಪ್ಪ ಕಬ್ಬೇರ್ ಹಾಗೂ ಉಪ ಮಹಾಪೌರರ ಸ್ಥಾನಕ್ಕೆ ವಾರ್ಡ್ ನಂ. 6ರ ದಿಲ್‌ಶಾದ್ ಬೇಗಂ ನದಾಫ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಜು. 4ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಯೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆಯ ಬಳಿಕ ಮಧ್ಯಾಹ್ನ 1 ಗಂಟೆಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನೆರವೇರಲಿದೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

The post ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್! appeared first on Samyukta Karnataka.

ಬಸ್ ಕಿಟಕಿಯಿಂದ ಗುಟ್ಕಾ ಉಗಿಯುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿ, ಸ್ಥಳದಲ್ಲೇ ಸಾವು
ಧಾರವಾಡ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಬಾಯಲ್ಲಿ ಹಾಕಿಕೊಂಡ ಗುಟ್ಕಾವನ್ನು ಕಿಟಕಿಯಿಂದ ಉಗಿಯುತ್ತಿದ್ದ ವೇಳೆ ಎಂ ಸ್ಯಾಂಡ್ ಹೊತ್ತು ಸಾಗುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ರುಂಡ ಕತ್ತರಿಸಿ ರಸ್ತೆಗೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಂದಗೋಳದ ಹುಬ್ಬಳ್ಳಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದಕೆರೆಯ ಬಳಿ ಬುಧವಾರ ಸಂಜೆ ನಡೆದಿದೆ.

ಶಿರೂರ ಗ್ರಾಮದ ನಿವಾಸಿ ಐಟಿಐ ವಿದ್ಯಾರ್ಥಿ ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಲಕ್ಷ್ಮೇಶ್ವರ ಡಿಪೋಗೆ ಸೇರಿದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಫಕ್ಕೀರೇಶ ಗುಟ್ಕಾ ಉಗಿಯಲು ಕಿಟಕಿಯಿಂದ ಇಣುಕಿದ್ದಾನೆ. ಈ ಸಂದರ್ಭದಲ್ಲಿ ಎದುರಿನಿಂದ ಎಂ-ಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ಫಕ್ಕೀರೇಶನ ತಲೆಗೆ ಬಡಿದು ರುಂಡ ಕತ್ತರಿಸಿ ರಸ್ತೆಗೆ ಬಿದ್ದಿದೆ.

ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯ ಕಂಡು ಕಂಬನಿ ಮಿಡಿದರು.

ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಕುಂದಗೋಳ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೃಷ್ಣಾ ನದಿಗೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸಾವು

The post ಬಸ್ ಕಿಟಕಿಯಿಂದ ಗುಟ್ಕಾ ಉಗಿಯುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿ, ಸ್ಥಳದಲ್ಲೇ ಸಾವು appeared first on Samyukta Karnataka.

ಎಸ್‌ಐಆರ್: ಯಾವುದೇ ಆತಂಕ ಬೇಡ, ಯಾವ ಹೆಸರೂ ಡಿಲೀಟ್ ಆಗಲ್ಲ
ಹುಬ್ಬಳ್ಳಿ: ಮತಪಟ್ಟಿಯ `ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಕುರಿತು ಯಾವುದೇ ಭಯ ಮತ್ತು ಆತಂಕ ಬೇಡ. ಇದೊಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಯಾವ ಮತದಾರರೂ ತಮ್ಮ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಅನರ್ಹರನ್ನು ಹಾಗೂ ದೋಷಗಳನ್ನು ಕಂಡುಕೊಳ್ಳಲು ಮಾತ್ರ ನಡೆಯುತ್ತಿರುವ ಪ್ರಕ್ರಿಯೆ ಇದು.

ಎಸ್‌ಐಆರ್‌ನಿಂದ ಯಾವ ಅರ್ಹ ಮತದಾರರ ಹೆಸರೂ ಡಿಲೀಟ್ ಆಗುವುದಿಲ್ಲ. ಚುನಾವಣಾ ಆಯೋಗ ಯಾರ ಹೆಸರನ್ನೂ ಡಿಲೀಟ್ ಮಾಡುವುದಿಲ್ಲ. ಎಸ್‌ಐಆರ್ ವೇಳೆ ನೀಡಲಾಗುವ ಅರ್ಜಿ ನಮೂನೆಯನ್ನು (ಎನ್ಯೂಮರೇಷನ್ ಫಾರ್ಮ್‌) ಸಹಿ ಮಾಡಿ ಸಲ್ಲಿಸುವುದು ಮಾತ್ರ ಕಡ್ಡಾಯ. ಒಂದು ವೇಳೆ ಈ ಅರ್ಜಿಯನ್ನು ತುಂಬಿ ಸಹಿ ಮಾಡಿ ಮರಳಿಸಿದಿದ್ದರೆ ಹೆಸರು ಡಿಲೀಟ್ ಆಗಲಿದೆ…!

ಧಾರವಾಡ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಆರ್. ಸ್ನೇಹಲ್ ಜನತೆಗೆ ನೀಡಿರುವ ಅಭಯವಿದು. ಎಸ್‌ಐಆರ್ ಕುರಿತು `ಸಂಯುಕ್ತ ಕರ್ನಾಟಕ’ ಪತ್ರಿಕೆ ಮಂಗಳವಾರ ಏರ್ಪಡಿಸಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಕ್ರಿಯೆ ಕುರಿತು ಜನರಿಗೆ ಇರುವ ಎಲ್ಲ ಅನುಮಾನಗಳನ್ನೂ ಪರಿಹರಿಸಿದರು.

`ಯಾವ ಆತಂಕವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಮನೆಗೆ ಬರುವ ಬಿಎಲ್‌ಓಗಳಿಗೆ (ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು) ಅರ್ಜಿಗಳನ್ನು ತುಂಬಿ ಮರಳಿಸಿಸಬೇಕು. ಒಂದನ್ನು ಗಮನಿಸಿ. ನೀವೊಂದು ಕಡೆ ಈಗ ಹಾಲಿ ವಾಸವಿದ್ದು, ನಿಮ್ಮ ಮತ ಬೇರೊಂದು ಬೂತ್‌ನಲ್ಲಿ ಇದೆ ಎಂದಾದರೆ ಬಿಎಲ್‌ಓಗಳು ನಿಮ್ಮ ಮನೆಗೆ ಎನ್ಯೂಮರೇಷನ್ ಫಾರ್ಮ್ ಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಮತ ಎಲ್ಲಿದೆಯೋ ಅಲ್ಲಿನ ಬಿಎಲ್‌ಓಗಳನ್ನು ಸಂಪರ್ಕಿಸಿ ಅರ್ಜಿ ತುಂಬಿಕೊಡಿ.

`ನಿಮ್ಮ ಮತ ಇರುವ ಮತಗಟ್ಟೆಯ ಬಿಎಲ್‌ಓಗಳ ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದನ್ನು ನೋಡಿಕೊಂಡು ಮುಂದುವರಿಯಿರಿ. ಇಂತಹ ಸಂದರ್ಭದಲ್ಲಿ ಜನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೇ ಪ್ರತಿಯೊಂದು ಮತಗಟ್ಟೆಯಲ್ಲೂ ಮತದಾರರ ಸಹಾಯ ಕೇಂದ್ರಗಳನ್ನು (ಫೆಸಿಲಿಟೇಷನ್ ಸೆಂಟರ್) ತೆರೆಯಲಾಗಿದೆ. ಬೇರೊಂದು ಮತಗಟ್ಟೆಯಲ್ಲಿ ಹೆಸರಿದ್ದವರು ಈ ಕೇಂದ್ರಗಳನ್ನು ಸಂಪರ್ಕಿಸಿದರೆ ಸಹಾಯ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಹಾಗೆಯೇ, ಒಂದು ವೇಳೆ ಬಿಎಲ್‌ಓಗಳು ಎಸ್‌ಐಆರ್‌ಗೆ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಚಿಂತೆ ಇಲ್ಲ; ನಿಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮತದಾರರ ಸಹಾಯ ಕೇಂದ್ರಕ್ಕೆ ಹೋಗಿ ಮಾಹಿತಿ ತುಂಬಿಕೊಡಿ. ನೀವು ಎಲ್ಲಿ ಬಂದು ಮಾಹಿತಿ ನೀಡಬೇಕು ಎಂಬ ವಿವರಗಳು ಮತ್ತು ಫೋನ್ ಸಂಖ್ಯೆಯನ್ನು ಬಿಎಲ್‌ಓಗಳು ನಿಮ್ಮ ಮನೆ ಬಾಗಿಲಿಗೆ ಅಂಟಿಸಿ ಹೋಗಿರುತ್ತಾರೆ ಎಂದು ಹೇಳಿದರು.

ಹಳೆಯ ಮತಪಟ್ಟಿ ದಾಖಲೆಗಳು ಅಥವಾ ಇನ್ಯಾವುದೇ ಕಾಗದಪತ್ರಗಳನ್ನು ಎಸ್‌ಐಆರ್ ವೇಳೆ ಸಲ್ಲಿಸಬೇಕಾಗಿಲ್ಲ. ಆಯೋಗ ಇದಕ್ಕಾಗಿ ವಿವರವಾದ ಎಲ್ಲ ಮಾಹಿತಿಗಳನ್ನು ಪ್ರಚುರಪಡಿಸಿದೆ. ಅನುಮಾನ ಇದ್ದಲ್ಲಿ ಇವುಗಳನ್ನು ಓದಿಕೊಳ್ಳಿ ಎಂದು ಸ್ನೇಹಲ್ ತಿಳಿಸಿದರು.

ಎಸ್‌ಐಆರ್, ಬಿಎಲ್‌ಓ, ಹಳೇ ಮತಪಟ್ಟಿ ಮಾಹಿತಿಗೆ ನೋಡಿ ಕೆಳಗಿನ ಲಿಂಕ್‌ಗೆ ಭೇಟಿ ನೀಡಿ
ಕೇಂದ್ರ ಚುನಾವಣಾ ಆಯೋಗ: voters.eci.gov.in
ರಾಜ್ಯ ಚುನಾವಣಾ ಆಯೋಗ: ceo.karnataka.gov.in

ನೋ ಡಾಕ್ಯೂಮೆಂಟ್ಸ್..: ಬಿಎಲ್‌ಓಗಳು ಮನೆಗೆ ಬಂದಾಗ ಅರ್ಜಿ ತುಂಬಿ ಸಹಿ ಮಾಡಿ ಕೊಟ್ಟರೆ ಸಾಕು. ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಯಾವ ದಾಖಲೆಯನ್ನೂ ಕೇಳುವುದೂ ಇಲ್ಲ. ಮತಗಟ್ಟೆ ಅಧಿಕಾರಿ ಪ್ರತಿ ಮತದಾರರಿಗೂ ತಲಾ ಎರಡು ಅರ್ಜಿ ನಮೂನೆಗಳನ್ನು ಕೊಡುತ್ತಾರೆ. ಅವುಗಳನ್ನು ತುಂಬಿ ಮರಳಿಸುವುದಷ್ಟೇ ಸಾರ್ವಜನಿಕರ ಕೆಲಸ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಅರ್ಜಿಗಳನ್ನು ತುಂಬುವ ಅವಕಾಶವನ್ನು ಆಯೋಗ ಕಲ್ಪಿಸಿದೆ. ಭರ್ತಿ ಮಾಡಿದ ಅರ್ಜಿಯಲ್ಲಿ ಒಂದನ್ನು ತಾವು ಇಟ್ಟುಕೊಳ್ಳುತ್ತಾರೆ. ಇನ್ನೊಂದನ್ನು ಮತದಾರರಿಗೆ ಕೊಟ್ಟಿರುತ್ತಾರೆ. ಇದನ್ನು ಕಾದಿಟ್ಟುಕೊಳ್ಳಬೇಕು. ತಮ್ಮ ಬಳಿಯ ಅರ್ಜಿಯನ್ನು ಬಿಎಲ್‌ಓಗಳು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಎಂದು ಸ್ನೇಹಲ್ ವಿವರಿಸಿದರು.

ದಾಖಲೆ ಅಗತ್ಯ; ಆದರೆ ಯಾರಿಗೆ?: ಆದರೆ 01.07.1987ಕ್ಕೆ ಮೊದಲು ಜನಿಸಿದವರು ಮಾತ್ರ ಚುನಾವಣಾ ಆಯೋಗ ಸೂಚಿಸಿರುವ ಹನ್ನೆರಡಲ್ಲಿ ಒಂದು ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಎಸ್‌ಐಆರ್‌ಗೆ ಸಿಬ್ಬಂದಿ ಆಗಮಿಸಿದಾಗ ಈ ದಾಖಲೆಯನ್ನು ಸಲ್ಲಿಸಬೇಕಾಗಿಲ್ಲ. 1987ರ ಮೊದಲು ಜನಿಸಿದವರಿಗೆ ಪರಿಷ್ಕರಣೆ ಮುಗಿದ ಮೇಲೆ ನೊಟೀಸ್ ಕೊಡಲಾಗುತ್ತದೆ. ಆ ನಂತರ ಅವರು ಸಂಬಂಧಿಸಿದ ಬಿಎಲ್‌ಓಗಳಿಗೆ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಹೆಚ್ಚಿನ ಯಾವುದೇ ಗೊಂದಲವಿಲ್ಲ ಎಂದು ಜಿಲ್ಲಾಧಿಕಾರಿಗಳು ಜನರ ಅನುಮಾನಗಳಿಗೆ ಸ್ಪಷ್ಟಪಡಿಸಿದರು.

2002 ಎಂಬುದೇ ದೊಡ್ಡ ಟೆನ್ಷನ್!: ಮತದಾರರಿಗೆ 2002ರ ಮತಪಟ್ಟಿ ದಾಖಲೆಗಳನ್ನು ಎಲ್ಲಿಂದ ಹುಡುಕುವುದು ಎಂಬುದೇ ಬಹುದೊಡ್ಡ ಟೆನ್ಷನ್ ವಿಷಯವಾಗಿದೆ. ಏಕೆಂದರೆ ಎಸ್‌ಐಆರ್‌ಗೂ 2002ರ ಮತಪಟ್ಟಿಯೇ ಮೂಲ ದಾಖಲೆಯಾಗಿ ಪರಿಗಣಿತವಾಗುತ್ತಿದೆ. ಈ ಅಂಶ ಫೋನ್ ಇನ್‌ನಲ್ಲೂ ಅನುರಣಿಸಿತು. ಎಲ್ಲ ಕರೆಗಳ ಅಂತರಾಳ ಈ ಪ್ರಶ್ನೆಯಿಂದಲೇ ಕೂಡಿತ್ತು. ಇದಕ್ಕೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರ ಜನರ ಆತಂಕವನ್ನು ದೂರ ಮಾಡಿತು.
`ಯಾರೂ 2002ರ ಮತಪಟ್ಟಿ ಅಥವಾ ದಾಖಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಕಾಲಂ ಖಾಲಿ ಬಿಟ್ಟುಬಿಡಿ. ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ನಿಯಮಬದ್ಧ ಘೋಷಣೆಗೂ ಈ ಅವಧಿಯಲ್ಲಿ ಅವಕಾಶವಿದೆ. 2002ರಲ್ಲಿ ತಂದೆ, ತಾಯಿಯ ಹೆಸರು ಮತಪಟ್ಟಿಯಲ್ಲಿ ಇಲ್ಲದಿದ್ದರೆ, ಅಜ್ಜ- ದೊಡ್ಡಪ್ಪ ಮತ್ತಿತರ ಹತ್ತಿರದ ಬಂಧುಗಳ ಹೆಸರಿದ್ದರೂ ಸ್ವೀಕಾರ್ಹ’ ಎಂದು ಸ್ನೇಹಲ್ ವಿವರಿಸಿದರು.

ಏಕೆ ಮೂಡಿದೆ ಆತಂಕ…?, ಎಂದು ನಡೆದಿತ್ತು ಈ ಕಾರ್ಯ?: ಎಸ್‌ಐಆರ್ ಪ್ರಕ್ರಿಯೆ ಕುರಿತು ಶಿಕ್ಷಿತರೂ ಸೇರಿ ಪ್ರತಿಯೊಬ್ಬರಿಗೆ ಅವರದ್ದೇ ಆದ ಅನುಮಾನಗಳಿವೆ. ಆತಂಕವಂತೂ ತುಸು ಹೆಚ್ಚೆ ಎನಿಸುವಂತಿದೆ. ಏಕೆ? ಎಸ್‌ಐಆರ್ ಹೆಸರು ಕೇಳಿದರೆ ಜನಕ್ಕೆ ಹೆದರಿಕೆ ಮೂಡುವಂತಾಗಿದೆಯಲ್ಲ, ಏನಿದು? ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಂದರೇನು? ಈಗ ಏಕೆ ಕೈಗೆತ್ತಿಕೊಳ್ಳಲಾಗಿದೆ? ದಾಖಲೆಗಳ ನೆಪ ಒಡ್ಡಿ ದಶಕಗಳಿಂದ ವೋಟ್ ಮಾಡುತ್ತಿರುವ ನಮ್ಮನ್ನು ಅಥವಾ ಆಯ್ದ ಕೆಲವರನ್ನು ಕೈಬಿಡುವ ಹುನ್ನಾರ ನಡೆಯುತ್ತಿದೆಯೇ?

`ಬಹುತೇಕರ ಆತಂಕಕ್ಕೆ ಮುಖ್ಯ ಕಾರಣ, ಹಳೆಯ ಮನೆ-ಹೊಸ ಮನೆ ಸಮಸ್ಯೆ ಎನ್ನಬಹುದು. ಅಂದರೆ ಅನೇಕರ ಮನೆ ವಿಳಾಸ ಬದಲಾಗಿದೆ. ಆದರೆ ಮತಗಟ್ಟೆ ವರ್ಗಾವಣೆಯಾಗಿಲ್ಲ. ಇದೊಂದು ಸಾಮಾನ್ಯ ಸಮಸ್ಯೆ. ಆದ್ದರಿಂದ ಯಾರೂ ಆತಂಕಿತರಾಗಬೇಡಿ. ನೀವು ಹಿಂದೆ ಮತದಾನ ಮಾಡಿದ ಮತಗಟ್ಟೆಯ ಬಿಎಲ್‌ಓ ಅವರನ್ನು ಸಂಪರ್ಕಿಸಿ. ಮನೆ ಬದಲಿಸಿದ ಮಾತ್ರಕ್ಕೆ ನಿಮ್ಮ ಹೆಸರು ಡಿಲೀಟ್ ಆಗಲ್ಲ. ಹಾಗೇ, ಎಸ್‌ಐಆರ್ ವೇಳೆ ಸಲ್ಲಿಕೆಯಾಗುವ ಯಾವ ಅರ್ಜಿಯೂ ತಿರಸ್ಕೃತವಾಗಲ್ಲ. ಟೆನ್ಷನ್ ಬಿಲ್‌ಕುಲ್ ಬೇಡವೇ ಬೇಡ’ ಎಂದು ಸ್ನೇಹಲ್ ಸ್ಪಷ್ಟವಾಗಿ ನುಡಿದರು.

25 ವರ್ಷದ ಹಿಂದೆ ನಡೆದಿತ್ತು ಎಸ್‌ಐಆರ್: ನಿಯಮಾನುಸಾರ ಎಸ್‌ಐಆರ್ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ಆಯೋಗದ ಸಾಂವಿಧಾನಿಕ ಪ್ರಕ್ರಿಯೆ. 2002ರಲ್ಲಿ ಮೊದಲ ಬಾರಿಗೆ ಇದು ನಡೆದಿತ್ತು. ಅರ್ಹರನ್ನು ಮಾತ್ರ ಮತಪಟ್ಟಿಯಲ್ಲಿ ಉಳಿಸುವುದು ಹಾಗೂ ಅನರ್ಹ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಇದರ ಉದ್ದೇಶವೇ ವಿನಾ ಇನ್ಯಾವುದೇ ದುರುದ್ದೇಶದ ಕೆಲಸ ಇದಲ್ಲ ಎಂದು ಚುನಾವಣಾಧಿಕಾರಿಗಳು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಸತ್ತವರ ಮಾಹಿತಿ ಕೊಟ್ಟರೆ ಹುಷಾರ್!:  ಎಸ್‌ಐಆರ್ ವೇಳೆ ಮೃತಪಟ್ಟವರ ಮಾಹಿತಿಯನ್ನು ತುಂಬಿ ಕೊಡುವಂತಿಲ್ಲ. ಒಂದು ವೇಳೆ ಸಲ್ಲಿಸಿದರೆ ಅಂತಹ ಮನೆಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸತ್ತವರ ಮಾಹಿತಿಯನ್ನು ತುಂಬಿ ಕೊಡುವುದು ಅಥವಾ ಎರಡೆರಡು ಕಡೆ ಮತ ಇರುವುದು ಎರಡೂ ಕಾನೂನು ಬಾಹಿರ.
ಎಸ್‌ಐಆರ್ ನಂತರ ಒಂದಕ್ಕಿಂತ ಹೆಚ್ಚು ಕಡೆ ಇರುವ ಮತಗಳೇನೋ ಪರಿಷ್ಕರಣೆಗೊಳ್ಳುತ್ತವೆ. ಆದರೆ ಸತ್ತವರ ವಿಷಯವಾಗಿ ಬಿಎಲ್‌ಓಗಳಿಗೆ (ಅಂದರೆ ಆಯೋಗಕ್ಕೆ) ಮಾಹಿತಿ ಇರುವುದಿಲ್ಲ. ಹೀಗಾಗಿ ಎಸ್‌ಐಆರ್ ಅರ್ಜಿ ಮೃತರ ಹೆಸರಲ್ಲೂ ಇರುವುದು ಸಹಜ. ಇಂತಹ ಅರ್ಜಿಯನ್ನು ಮನೆಯವರಿಗೆ ಕೊಟ್ಟಾಗ, ಸಂಬಂಧಿಸಿದ ಮನೆಯವರು ತಮ್ಮ ಮನೆಯಲ್ಲಿನ ಈ ವ್ಯಕ್ತಿ ಜೀವಂತ ಇಲ್ಲ ಎಂಬುದನ್ನು ಬಿಎಲ್‌ಓಗೆ ತಿಳಿಸಬೇಕು. ಹಾಗೂ ಸತ್ತವರ ಹೆಸರಿನ ಅರ್ಜಿಯನ್ನು ಭರ್ತಿ ಮಾಡದೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಹಳೇ ಫೋಟೊ ಏಕೆ, ಹೊಸ ಫೋಟೊ ಕೊಡಿ ಎಂದ ಡಿಸಿ: ಎಸ್‌ಐಆರ್ ವೇಳೆ ಯಾವುದೇ ದಾಖಲೆಗಳನ್ನೂ ಸಲ್ಲಿಸಬೇಕಿಲ್ಲ ನಿಜ. ಆದರೆ ಪ್ರತಿಯೊಬ್ಬರೂ ತಮ್ಮ ಈಚಿನ ಪಾಸ್‌ಪೋರ್ಟ್ ಆಕಾರದ ಭಾವಚಿತ್ರ ಕೊಟ್ಟರೆ ಒಳ್ಳೆಯದು ಎಂದು ಜಿಲ್ಲಾಧಿಕಾರಿಗಳು ಜನತೆಗೆ ಸಲಹೆ ಮಾಡಿದರು. ಫೋಟೋ ಕೊಡುವುದು ಕಡ್ಡಾಯವೇನಲ್ಲ. ಆದರೆ ಹೊಸ ಭಾವಚಿತ್ರವನ್ನು ಕೊಟ್ಟರೆ ಮುಂದಿನ ಮತದಾರರ ಗುರುತಿನ ಚೀಟಿಯಲ್ಲಿ (ಎಪಿಕ್ ಕಾರ್ಡ್) ಹೊಸ ಫೋಟೊ ಬಂದಂತಾಗುತ್ತದಲ್ಲವೇ ಎಂದು ಅವರು ಸಾರ್ವಜನಿಕರೊಬ್ಬರಿಗೆ ಹಾಸ್ಯಮಯವಾಗಿ ಕೇಳಿದರು.

ಎಸ್‌ಐಆರ್‌ಗೆ ಬಂದೇ ಬರ‍್ತಾರೆ! ಇಲ್ದಿದ್ರೆ ಏಜೆಂಟರು ಬಿಡಬೇಕಲ್ಲ: ಎಸ್‌ಐಆರ್ ಎನ್ಯೂಮರೇಷನ್ ಫಾರ್ಮ್ ಆನ್‌ಲೈನ್‌ನಲ್ಲಿ ತುಂಬಿ ಕೊಡಲೂ ಅವಕಾಶ ಇರುವುದರಿಂದ, ಪ್ರತಿ ಮನೆಗೂ ಬಿಎಲ್‌ಓಗಳು ಬಂದೇ ಬರುವರೇ ಅಥವಾ ಕೆಲವು ಮನೆಗಳಿಗೆ ಬರುವುದಿಲ್ಲವೇ ಎನ್ನುವ ಪ್ರಶ್ನೆಯೂ ಫೋನ್ ಇನ್‌ನಲ್ಲಿ ಕೇಳಿ ಬಂತು.
`ಬಿಎಲ್‌ಓಗಳು ಬಿಟ್ಟರೂ ಬಿಎಲ್‌ಎಗಳು (ರಾಜಕೀಯ ಪಕ್ಷಗಳಿಗೆ ಸೇರಿದ ಬೂತ್ ಮಟ್ಟದ ಏಜೆಂಟರು) ಬಿಡಬೇಕಲ್ಲ? ಹೀಗಾಗಿ ಪ್ರತಿ ಮನೆಗೂ ಬಿಎಲ್‌ಓಗಳು ಬಂದೇ ಬರುತ್ತಾರೆ. ಸಧ್ಯ ಜಿಲ್ಲೆಯಲ್ಲಿ 1‌,665 ಕಾಂಗ್ರೆಸ್ ಮತ್ತು ಇಷ್ಟೇ ಸಂಖ್ಯೆಯ ಬಿಜೆಪಿ ಬಿಎಲ್‌ಎಗಳನ್ನು ಬಿಎಲ್‌ಓಗಳ ಜೊತೆ ಸಮನ್ವಯ ಮಾಡಲಾಗಿದೆ. ಉಳಿದಂತೆ ಸುಮಾರು 300ರಷ್ಟು ಜೆಡಿಎಸ್ ಮತ್ತಿತರ ಪಕ್ಷಗಳ ಏಜೆಂಟರೂ ಇರುತ್ತಾರೆ. ಹೀಗಾಗಿ ಯಾವುದೇ ಸಾರ್ವಜನಿಕರು ಕೈತಪ್ಪಿ ಹೋಗುವುದಿಲ್ಲ’ ಎಂದು ಸ್ನೇಹಲ್ ನಕ್ಕರು. ಒಂದು ವೇಳೆ ಬಾರದಿದ್ದರೆ, ಆಗ ತಮ್ಮ ಸಮೀಪದ ಫೆಸಿಲಿಟೇಷನ್ ಕೇಂದ್ರ (ಮತಗಟ್ಟೆ ಸಹಾಯ ಕೇಂದ್ರ) ಸಂಪರ್ಕಿಸಿ ಅರ್ಜಿ ತುಂಬಿಕೊಡುವುದಕ್ಕೆ ಅವಕಾಶ ಇದ್ದೇ ಇದೆ.

ಜಾತಿ-ಧರ್ಮಕ್ಕೆ ಸಂಬಂಧ ಇಲ್ಲ; ಮೋಸ ಆಗೋದು ಅಸಾಧ್ಯ: ಎಸ್‌ಐಆರ್ ಜಾತಿ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರನ್ನೋ ಗುರಿಯಾಗಿಸಿ ನಡೆಯುತ್ತಿಲ್ಲ. ಅಥವಾ ಕೆಲವರು ಮಾಡುತ್ತಿರುವಂತೆ ಯಾರನ್ನೋ ಮತದಾರರ ಪಟ್ಟಿಯಿಂದ ಕೈಬಿಡುವುದು ಸಾಧ್ಯವೂ ಇಲ್ಲ. ಇದೊಂದು ಅತ್ಯಂತ ಪಾರದರ್ಶಕ, ನಿಯಮಬದ್ಧ ಮತ್ತು ಸರ್ಕಾರಿ ಸಿಬ್ಬಂದಿ ಕೈಯಾಡಿಸಲು (ಮ್ಯಾನಿಪ್ಯೂಲೇಷನ್ ಮಾಡಲು) ಸಾಧ್ಯವೇ ಇಲ್ಲದ ಸಾರ್ವಜನಿಕ ಕಾರ್ಯ. ಜನತೆ ತುಂಬಿ ಕೊಡುವ ಪರಿಷ್ಕರಣೆ ಅರ್ಜಿಯನ್ನು ನಾವು ತಿರಸ್ಕರಿಸುವುದಕ್ಕೆ ಸಾಧ್ಯವೇ ಇಲ್ಲ. ಅಂತಿಮ ಪಟ್ಟಿ ಪ್ರಕಟವಾಗುವಾಗ ಅನರ್ಹತೆ ಕಂಡು ಬಂದವರಷ್ಟೇ ಡಿಲೀಟ್ ಆಗುತ್ತಾರೆ ಎಂದು ಸ್ನೇಹಲ್ ವಿವರಿಸಿದರು.

ವೋಟ್ ಟ್ರಾನ್ಸ್‌ಫರ್‌ ಸದ್ಯ ಬೇಡ: ಎಸ್‌ಐಆರ್ ಪ್ರಕ್ರಿಯೆ ಮುಗಿಯುವವರೆಗೆ ತಮ್ಮ ಮತಗಳನ್ನು ವರ್ಗಾಯಿಸಿಕೊಳ್ಳುವುದನ್ನು ತಡೆಹಿಡಿಯಿರಿ. ಇದು ಎಲ್ಲರಿಗೂ ಅನುಕೂಲಕರ. ಇಲ್ಲವಾದರೆ ಅನಗತ್ಯವಾಗಿ ಕ್ಲಿಷ್ಟ ಪ್ರಕ್ರಿಯೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಎಸ್‌ಐಆರ್ ಮುಗಿದ ಮೇಲೆ ನಿಮ್ಮ ಮತವನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಇದ್ದೇ ಇದೆ ಎಂದು ಸ್ನೇಹಲ್ ಸಲಹೆ ಮಾಡಿದರು.

ಸಹಿ ಮಾಡಿಕೊಟ್ಟರೆ ಸಾಕು: ಅನಕ್ಷರಸ್ಥರು ಅರ್ಜಿ ತುಂಬಿ ಕೊಡುವುದು ಹೇಗೆಂಬ ಚಿಂತೆಯನ್ನು ಬಿಡಿ. ಮನೆಗೆ ಬರುವ ಬಿಎಲ್‌ಓಗಳು ನೀಡುವ ಅರ್ಜಿಗೆ ಸಹಿ ಮಾಡಿ ಮರಳಿಸಿ ಸಾಕು ಎಂದು ಜಿಲ್ಲಾಧಿಕಾರಿಗಳು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಆತ್ಮೀಯ ಸ್ವಾಗತ, ಗೌರವ: ಸಂಯುಕ್ತ ಕರ್ನಾಟಕ' ಫೋನ್ ಇನ್‌ಗೆ ಆಗಮಿಸಿದ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರನ್ನು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ್ ದೇಸಾಯಿ ಸ್ವಾಗತಿಸಿದರು. ಟ್ರಸ್ಟ್‌ನ ಪ್ರಮುಖ ಪ್ರಕಟಣೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಗೌರವಿಸಿದ ಅವರು,ಸಾರ್ವಜನಿಕರಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿರುವ ಎಸ್‌ಐಆರ್ ಕುರಿತು ಫೋನ್ ಇನ್‌ಗೆ ಸಮ್ಮತಿಸಿದ್ದಕ್ಕೆ ಕೃತಜ್ಞತೆ’ ವ್ಯಕ್ತಪಡಿಸಿದರು. `ಸಂಯುಕ್ತ ಕರ್ನಾಟಕ’ ಸಿಇಓ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಗೌರವ ಸಲ್ಲಿಸಿದರು.

ಬಿಡುವಿಲ್ಲದೇ ಕರೆಗಳು…: ಜಿಲ್ಲಾಧಿಕಾರಿಗಳಿಗೆ ಒಂದು ನಿಮಿಷವೂ ಬಿಡುವಿಲ್ಲದಂತೆ ಕರೆಗಳ ಮಹಾಪೂರವೇ ಹರಿದು ಬಂತು. ಎಸ್‌ಐಆರ್ ಕುರಿತು ಇರುವ ಸಣ್ಣ ಪುಟ್ಟ ಆತಂಕಗಳನ್ನೂ ತೋಡಿಕೊಂಡ ಓದುಗರಿಗೆ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಸ್ನೆಹಲ್ ಅವರು ನೀಡಿದ ಸಮಾಧಾನದ ಉತ್ತರಗಳು ಗಮನ ಸೆಳೆದವು. ಜಿಲ್ಲಾಧಿಕಾರಿಗಳ ಸಹನೆ ಮತ್ತು ಧೈರ್ಯ ತುಂಬಿದ ರೀತಿಗೆ ಆತಂಕದ ಕರೆ ಮಾಡಿದವರು ಸಂತೋಷದಿಂದ ಥ್ಯಾಂಕ್ಯೂ ಮೇಡಂ ಎಂದು ಫೋನಿಡುತ್ತಿದ್ದರು.

ಎಸ್‌ಐಆರ್: ಧಾರವಾಡ ಡಿಸಿ ಜೊತೆ `ಸಂ.ಕ.’ ಅರ್ಥಪೂರ್ಣ ಫೋನ್ ಇನ್

The post ಎಸ್‌ಐಆರ್: ಯಾವುದೇ ಆತಂಕ ಬೇಡ, ಯಾವ ಹೆಸರೂ ಡಿಲೀಟ್ ಆಗಲ್ಲ appeared first on Samyukta Karnataka.

ದೋಷರಹಿತ ಮತದಾರ ಪಟ್ಟಿ ಸಿದ್ಧಪಡಿಸಲು ಎಸ್‌ಐಆರ್ ಅಗತ್ಯ
ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ಸೋಮವಾರ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಜಾಗೃತಿ ಜಾಥಾ ಜರುಗಿತು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮತ್ತು ಜಿ.ಪಂ. ಸಿಇಓ ಭುವನೇಶ ಪಾಟೀಲ ಅವರು ಆಕಾಶಕ್ಕೆ ಬಲೂನ್‌ಗಳನ್ನು ಹಾರಿಸುವ ಮೂಲಕ ಬೃಹತ್ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ದೋಷರಹಿತ ಹಾಗೂ ನಿಖರವಾದ ಮತದಾರರ ಪಟ್ಟಿಯ ಅವಶ್ಯಕತೆಯನ್ನು ವಿವರಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕನೂ ಎನ್ಯುಮರೇಷನ್ ಫಾರ್ಮ್‌ ತಪ್ಪದೇ ಭರ್ತಿ ಮಾಡಿ ಸಲ್ಲಿಸಬೇಕು ಎಂದರು.

ಜಿ.ಪಂ. ಸಿಇಒ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯ ಪಾತ್ರ ಹಿರಿದಾಗಿದ್ದು, ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟರು ಸೇರಿದಂತೆ ಸಾರ್ವಜನಿಕರೆಲ್ಲರೂ ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮತದಾರರ ನೋಂದಣಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸಹಾಯಕ ಅಧಿಕಾರಿ ಉಮೇಶ ಸವಣೂರ, ಪಾಲಿಕೆಯ ವಲಯ ಕಚೇರಿ ಆಯುಕ್ತ ಅರವಿಂದ ಜಮಖಂಡಿ, ಶಂಕರ ಪಾಟೀಲ ಮತ್ತು ರಮೇಶ್ ನೂಲ್ವಿ ಇತರರು ಇದ್ದರು.

ಗಮನ ಸೆಳೆದ ಜಾಥಾ: ಇಲ್ಲಿಯ ಮಹಾನಗರ ಪಾಲಿಕೆ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಮತ್ತು ಜಿ.ಪಂ. ಸಿಇಒ ಭುವನೇಶ ಪಾಟೀಲ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದೋಷಮುಕ್ತ ಮತದಾರರ ಪಟ್ಟಿ-ಬಲಿಷ್ಠ ಪ್ರಜಾಪ್ರಭುತ್ವ ಎಂಬ ಸಂದೇಶ ಸಾರುತ್ತಲೇ ಸಾಗಿದರು.

ಜಾಥಾವು ಮಹಾರಾಣಾ ಪ್ರತಾಪ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುತ್ತ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ನಂತರ ಕಲಾಭವನಕ್ಕೆ ಆಗಮಿಸಿ ಸಂಪನ್ನಗೊಂಡಿತು.

SIR: ಇಂದು ಡಿಸಿ ಜತೆ ಸಂಯುಕ್ತ ಕರ್ನಾಟಕ ಫೋನ್ ಇನ್ ಆಯೋಜನೆ

The post ದೋಷರಹಿತ ಮತದಾರ ಪಟ್ಟಿ ಸಿದ್ಧಪಡಿಸಲು ಎಸ್‌ಐಆರ್ ಅಗತ್ಯ appeared first on Samyukta Karnataka.

ನಿಜವಾದ ರೈತರು ಹೇಳಿದರೆ ಬಿಡದಿ ಟೌನ್‌ಶಿಪ್ ಕೈ ಬಿಡ್ತೇವೆ
ಹುಬ್ಬಳ್ಳಿ: ಬಿಡದಿಯಲ್ಲಿ ಟೌನ್‌ಶಿಪ್ ಸ್ಥಾಪನೆ ಬೇಡ ಎಂದು ನಿಜವಾದ ರೈತರು ಹೇಳಿದರೆ ನಾವು ಯೋಜನೆಯನ್ನು ಕೈ ಬಿಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಬಿಡದಿ ಟೌನ್‌ಶಿಪ್ ಕುರಿತು ರಾಜಕೀಯ ಹೋರಾಟ ನಡೆಯುತ್ತಿದೆ. ರೈತರು ಬೇಡ ಎಂದು ಹೇಳಿದರೆ ನಾವು ಟೌನ್‌ಶಿಪ್ ಮಾಡಲು ಹೋಗುವುದಿಲ್ಲ. ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದರೆ 2013ರ ಭೂಸುಧಾರಣೆ ಕಾಯ್ದೆ ಪ್ರಕಾರ ಮಾರುಕಟ್ಟೆಯ ದರಕ್ಕಿಂತ ಮೂರುಪಟ್ಟು ಹಣ ನೀಡಬೇಕಾಗುತ್ತದೆ. ಇದು ನಮಗೂ ಹೊರೆಯಾಗಲಿದೆ ಎಂದರು.

ಹಿಂದೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ, ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಇದ್ದಾಗ ಈ ಯೋಜನೆಗೆ ಹಸಿರು ನಿಶಾನೆ ತೋರಲಾಗಿತ್ತು. ಅದನ್ನೇ ನಾವು ಮುಂದುವರೆಸಿದ್ದೇವೆ ವಿನಃ ಇದರಲ್ಲಿ ಹೊಸತಿಲ್ಲ. ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಅನಗತ್ಯ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದರು.

ಸೆಲ್ಫಿ ದುರಂತ: ಒಬ್ಬರನ್ನೊಬ್ಬರು ಕಾಪಾಡಲು ಹೋಗಿ ಐವರು ಸಾವು

The post ನಿಜವಾದ ರೈತರು ಹೇಳಿದರೆ ಬಿಡದಿ ಟೌನ್‌ಶಿಪ್ ಕೈ ಬಿಡ್ತೇವೆ appeared first on Samyukta Karnataka.

ಗೃಹಲಕ್ಷ್ಮೀ ಅವ್ಯವಹಾರ ಮರೆಮಾಚಲು ಪರಿಷ್ಕರಣೆ ನಾಟಕ
ಹುಬ್ಬಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದನ್ನು ಮುಚ್ಚಿಹಾಕುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪರಿಷ್ಕರಣೆಯ ಸಬೂಬು ಹೇಳುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.

ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ರಾಜ್ಯದ ಜನರ ಗಮನಕ್ಕೆ ತರಲಾಗಿದೆ. ಈ ಸಂಬಂಧ ಅದಕ್ಕೆ ತೇಪೆ ಹಚ್ಚುವ ಕೆಲಸವನ್ನೂ ಸಿದ್ದರಾಮಯ್ಯ ಸರ್ಕಾರ ಮಾಡಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಗಿನ ಸಚಿವರು, ಮುಖ್ಯಮಂತ್ರಿ ಇಬ್ಬರೂ ಬದಲಾಗಿದ್ದಾರೆ. ಈಗ ಜನ ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ: ಅಯೋಧ್ಯೆಯ ರಾಮ ಮಂದಿರ ಗುರಿಯಾಗಿತ್ತೇ?

ಡಿ.ಕೆ. ಶಿವಕುಮಾರ ಅವರು ಯೋಜನೆಯ ಪರಿಷ್ಕರಣೆಯ ನೆಪದಲ್ಲಿ ಕಳೆದ ಮೂರು ವರ್ಷಗಳಲ್ಲಾದ ಹಗರಣಗಳನ್ನು ಮರೆಮಾಚುವ ಸಿದ್ಧತೆ ನಡೆಸಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.

ಬೆಂಗಳೂರು: IT ಕ್ಷೇತ್ರಗಳಿಗೆ ಉತ್ತೇಜನ – UP ಸರ್ಕಾರದ ಹೂಡಿಕೆ ಅಭಿಯಾನ

The post ಗೃಹಲಕ್ಷ್ಮೀ ಅವ್ಯವಹಾರ ಮರೆಮಾಚಲು ಪರಿಷ್ಕರಣೆ ನಾಟಕ appeared first on Samyukta Karnataka.