ಡಿಂಪಲ್ ದಿವ್ಯಾರ ಪ್ರೇರಣೆಯ ಪಯಣ

Advertisement

ಮಾತೆ ಮುತ್ತು ಎಂಬಂತೆ ತಮ್ಮ ಮಾತಿನ ಲವಲವಿಕೆಯಿಂದ ಜನಪ್ರಿಯರಾಗಿರುವ ದಿವ್ಯ ಜ್ಯೋತಿ ಪ್ರಸ್ತುತ ಕನ್ನಡ ವಾರ್ತಾವಾಚಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಗುಳಿಕೆನ್ನೆ ಚೆಲುವೆ ನಡೆದು ಬಂದ ದಾರಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಯುವತಿಯರಿಗೆ ಪ್ರೇರಣಾದಾಯಕ.
ತಂದೆ ದಿವಂಗತ ಎ.ಜಿ ಶಿವಾನಂದ ಮೂರ್ತಿ ಮತ್ತು ತಾಯಿ ಕಮಲಾ. ಮೂಲತಃ ತುಮಕೂರಿನವರಾದರು ಇವರು ಹುಟ್ಟಿ ಬೆಳೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಚಿಕ್ಕವರಿದ್ದಾಗ ನೃತ್ಯದತ್ತಲೂ ಆಸಕ್ತಿ. ಬಿಎ ಪದವಿ ಪೂರ್ಣಗೊಳಿಸಿದ್ದಾರೆ.

ಪ್ರೇರಣೆಯ ಹಾದಿ…
ಬದುಕು ಅನಿರೀಕ್ಷಿತ ಎಂಬಂತೆ ಚಿಕ್ಕ ವಯಸ್ಸಿನಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡುಬಿಟ್ಟರು. ಕಷ್ಟದ ಸಂದರ್ಭದಲ್ಲಿ ಕುಗ್ಗದೆ. ಅದನ್ನು ಹೆಮ್ಮೆಟ್ಟಿಸಿ ನಿಲ್ಲುವೆ ಎಂದು ಬಂದ ಕಷ್ಟಗಳನ್ನು ಎದುರಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತ, ತಮ್ಮ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಂಡು ಬಂದರು.

ಕೇಬಲ್ ಚಾನೆಲ್‌ನಿಂದ…
ಮೊದಲು ಕೇಬಲ್ ಚಾನೆಲ್ ಜಾಹೀರಾತು ಕಂಡು ನಿರೂಪಣೆ ಯಾಕೆ ಟ್ರೈ ಮಾಡಬಾರದು ಎಂದು ಸ್ಕ್ರೀನ್ ಟೆಸ್ಟ್‌ಗೆ ಹಾಜರಾದರು ದಿವ್ಯಾಜ್ಯೋತಿ. ಕೇಬಲ್ ಚಾನೆಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಶೋ ನಡೆಸುತ್ತಿದ್ದರು. ನಂತರದಲ್ಲಿ ಉದಯ ಮ್ಯೂಸಿಕ್‌ನಲ್ಲಿ ವಿಜೆ ಆಗಬೇಕೆನ್ನುವ ಆಸೆಯಂತೆ `ಹಾಯ್ ಹೆಲ್ಲೋ, ಗ್ರೇಟ್ಮಾರ್ನಿಂಗ್ ಫ್ರೆಂಡ್ಸ್ ನಾನು ನಾನು ನಿಮ್ಮೆಲ್ಲರ ನೆಚ್ಚಿನ ಅಚ್ಚುಮೆಚ್ಚಿನ ಒನ್ ಆ್ಯಂಡ್ ಓನ್ಲಿ ನಿಮ್ಮ ದಿವ್ಯ’ ಎಂದು ಆರಂಭ ಮಾಡಿ ಜನರ ಜೊತೆ ಮಾತನಾಡಿ ಜನರ ಮನಸ್ಸನ್ನು ಗೆದ್ದರು. ವಿಜೆಯಾಗಿ ಐದು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಸುದ್ದಿಚಾನೆಲ್‌ನಲ್ಲಿ ಸಿನಿ ಅಡ್ಡಾ ಕಾರ್ಯಕ್ರಮವನ್ನು ನಿರೂಪಿಸಿ, ಈಗ ಸುದ್ದಿಯನ್ನು ಜನರಿಗೆ ತಲುಪಿಸುತ್ತಾ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಕನ್ನಡದ ಖಾತ್ಯ ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದು. ಮೆಚ್ಚುಗೆ ಪಡೆದಿದ್ದಾರೆ. ಇವರ ಮಾಧ್ಯಮ ಪಯಣ ೨೦೦೭ರಿಂದ ಪ್ರಾರಂಭವಾಗಿ ೧೫ ವರ್ಷಗಳಿಂದ ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ.
ಇವರ ನಿರೂಪಣೆಗೆ ಜನರ ಪ್ರೀತಿಯ ಜೊತೆಗೆ ಕೆಂಪೇಗೌಡ ಪ್ರಶಸ್ತಿ, ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನ್ಯೂಸ್ ಟೈಮ್ ಆಫ್ ಬೆಸ್ಟ್ ಆ್ಯಂಕರ್ ಪ್ರಶಸ್ತಿಗಳು ದೊರತಿವೆ.
ಮಹೇಶ್ ಅವರ ಜೊತೆ ಮದುವೆಯಾಗಿರುವ ಇವರ ಶುಭ ದಾಂಪತ್ಯಕ್ಕೆ ಮೂರುವರೆ ವರ್ಷ. ಇವರಿಗೆ ಮುದ್ದಾದ ಹೆಣ್ಣು ಮಗು ಇದ್ದು ವೇದಾಂಶಿ ಎಂದು ಹೆಸರು .

ಕೆಲಸದ ಬಗ್ಗೆ ಶ್ರದ್ಧೆ, ಗೌರವ ಇರಲಿ, ಬೆಳೆದುಬಿಟ್ಟೇ ಅನ್ನೋ ಅಹಂ ಬರದ ಹಾಗೆ ನೋಡಿಕೊಂಡರೆ ಸಹಜವಾಗಿ ಜನರ ಪ್ರೀತಿ ಸಿಗುತ್ತೆ ಎನ್ನುತ್ತಾರೆ ದಿವ್ಯ ಜ್ಯೋತಿ.– ಆನಂದ ಜೇವೂರ್, ಕಲಬುರಗಿ