ವಿದ್ಯಾಗಿರಿಯಲ್ಲಿ ಲೋಕಾಯುಕ್ತ ದಾಳಿ

ಬಾಗಲಕೋಟೆ:ಬಾದಾಮಿ ತಾಲೂಕಿನ ಹೂಲಗೇರಿ ಪಿಡಿಒ ಎಸ್.ಪಿ.ಹಿರೇಮಠ ಅವರ ವಿದ್ಯಾಗಿರಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ‌ ಮಾಡಿದ್ದಾರೆ.

ಎಸ್.ಪಿ.ಹಿರೇಮಠ ಅವರು ಅಕ್ರಮ ಆಸ್ತಿಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಪಿ.ಸಿದ್ದೇಶ ನೇತೃತ್ವದ‌ ತಂಡ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದೆ.

ಹೂಲಗೇರಿ‌ ಪಂಚಾಯತಿ ಕಚೇರಿ, ಹಿರೇಮಠ ಅವರ ನರಗುಂದದ ನಿವಾಸದ ಮೇಲೆಯೂ ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿದೆ.