ಧಾರವಾಡದ ರೈತರಿಗೆ 30 ಕೋಟಿ ಬೆಳೆವಿಮಾ ಬಿಡುಗಡೆ

ಬೆಂಗಳೂರು: ಧಾರವಾಡದ ರೈತರಿಗೆ 30 ಕೋಟಿ ಬೆಳೆವಿಮಾ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು
ಧಾರವಾಡ ಜಿಲ್ಲೆಯ 2024ರ ಖಾರೀಫ್ ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆ ವಿಮಾ ಮಾಡಿಸಿದ ಕುಂದಗೋಳ ಹಾಗೂ ಶಿರಗುಪ್ಪಿ ಹೋಬಳಿಗಳ ರೈತರಿಗೆ ಅತಿಯಾದ ಮಳೆಯಿಂದ ಹಾನಿಗೊಳಗಾದ ಈ ಬೆಳೆಗೆ ಈಗ ಅಂದಾಜು 30 ಕೋಟಿ ಹಣವನ್ನು  ವಿಮೆ ಬಿಡುಗಡೆಗೆ ಆದೇಶ ನೀಡಲಾಗಿದ್ದು ಈ ಮೊದಲು ಈ ಬೆಳೆಗಳಿಗೆ ವಿವಿಧ ಕಾರಣಗಳಿಂದ  ವಿಮಾ ಬಿಡುಗಡೆಯಾಗಿರಲಿಲ್ಲ.  ಮುಖ್ಯವಾಗಿ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯವರು  ತಾಂತ್ರಿಕ ಕಾರಣಗಳೊಂದಿಗೆ ಬೆಳೆ ಕಟಾವು ಸಮೀಕ್ಷೆ ಪ್ರಕಾರ ವಿಮೆ ನೀಡಲು ಮಾನದಂಡಗಳು ಹೊಂದಾಣಿಕೆಯಾಗುತ್ತಿಲ್ಲವೆಂದು ನಿರಾಕರಿಸಿದ್ದರು. ನಂತರ ನಾನು  ಜಿಲ್ಲಾಧಿಕಾರಿಗಳಿಗೆ ಈ ವಿಷಯವನ್ನು ವಿಮಾ ಪರಿಹಾರದ ಜಿಲ್ಲಾ ಮಟ್ಟದ ಜಂಟಿ ಸಮಿತಿಯಲ್ಲಿ (DLJC) ತೆಗೆದುಕೊಂಡು  ಇತ್ಯರ್ಥಗೊಳಿಸಲು ಸೂಚಿಸಿದ್ದೆನು. ಅದಕ್ಕೂ ವಿಮಾ ಕಂಪನಿ ವಿವಿಧ ಹಂತದಲ್ಲಿ ಅಪೀಲು ಮಾಡಿ ಅಡತಡೆಗಳೆನ್ನು ಉಂಟು ಮಾಡಿತ್ತು, ಕೊನೆಗೆ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್‌ಸಿಂಗ್ ಚವ್ಹಾಣ ಅವರ ನೇತೃತ್ವ ಹಾಗೂ ಹಣಕಾಸು ಕಾರ್ಯದರ್ಶಿಗಳೊಂದಿಗೆ ನಾನು ಸಭೆ ನಡೆಸಿ ಅವರಿಗೆ ವಿವರವಾಗಿ ಮನದಟ್ಟು ಮಾಡಿ ಧಾರವಾಡ ಜಿಲ್ಲೆಯ ಎರೆಡು ಹೋಬಳಿಯ ಹೆಸರು ಬೆಳೆಗೆ ವಿಮೆ ಮಾಡಿದ ರೈತರಿಗೆ ವಿಮೆ ಬಿಡುಗಡೆಗೆ ಮಾಡುವಂತೆ ಕೋರಿದ್ದೆನು.
ಈಗ ವಿಮೆ ಬಿಡುಗಡೆ ಆಗಿದ್ದು ಅತೀ ಶೀಘ್ರದಲ್ಲೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ
ಆದರೆ ಕೆಲ ಮಧ್ಯವರ್ತಿಗಳು ತಾವೇ ವಿಮೆ ಬಿಡುಗಡೆ ಮಾಡಿಸಿರುವುದಾಗಿ ಹೇಳಿ ರೈತರಿಂದ ಅಧಿಕ ಹಣ ಪಡೆಯುವ ದಾರಿ ತಪ್ಪಿಸುವ ವ್ಯವಸ್ಥಿತ ಜಾಲವೇ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಯಾರಿಗೂ ತಮ್ಮ ಖಾತೆಯಿಂದ ಹಣ ನೀಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರದ ಆಡಳಿತದಲ್ಲಿ ರೈತ ಮತ್ತು ಸರ್ಕಾರದ ನಡುವೆ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
ಯಾರಾದರೂ ಹಣ ಕೇಳಿದರೆ ನಮ್ಮ ಕಛೇರಿಗೆ ಅಥವಾ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳ ಗಮನಕ್ಕೆ ತನ್ನಿ.
ವಿಮೆ ಹಣ ದೊರಕಿ ರೈತರಿಗೆ ನೆರವಾಗುವಂತಹ ಯೋಜನೆ ರೂಪಿಸಿ ರೈತರ ಬೆನ್ನಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ   ಅದನ್ನು ಸಕಾರಾತ್ಮಕ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಕೃಷಿ ಸಚಿವ  ಶಿವರಾಜ್‌ಸಿಂಗ್ ಚವ್ಹಾಣ್  ಅವರಿಗೆ ಧನ್ಯವಾದಗಳು ತಿಳಿಸಿದ್ದಾರೆ.