ನಾಟಿಂಗ್ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ – 20 ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟ್ರೆಂಟ್ ಬ್ರಿಡ್ಜ್ ನಲ್ಲಿ ಇಂದು ಚಾಲನೆ ದೊರೆತಿದ್ದು, ಉಭಯ ತಂಡಗಳು ಡಿಸೆಂಬರ್ 2023ರ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು. ಉಭಯ ತಂಡಗಳು ತಮ್ಮ ತಮ್ಮ ಇತ್ತೀಚಿನ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನಗಳೊಂದಿಗೆ ಗೆಲುವು ಸಾಧಿಸಿ, ಹೆಚ್ಚಿನ ವಿಶ್ವಾಸ ಹಾಗೂ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯುತ್ತಿವೆ. ಈ ವರ್ಷ ಭಾರತ ತಂಡವು ಆಡುತ್ತಿರುವ ಮೊದಲ ಟಿ20 ಪಂದ್ಯವೂ ಇದಾಗಿದ್ದು. ಸ್ಪಿನ್ ಅಲ್ರೌಂಡರ್ ಸ್ನೇಹಾ ರಾಣಾ ಮತ್ತು ಮಧ್ಯಮವೇಗಿ ಅಮನ್ನೋತ್ ಕೌರ್ ಅವರ ಮೇಲೆ ಆಯ್ಕೆಗಾರರು ಹೆಚ್ಚು ನಿಗಾ ಇಟ್ಟಿದ್ದಾರೆ. ಏಕೆಂದರೆ ಈ ಸರಣಿಯಲ್ಲಿ ಬೌಲರ್ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಅವರು ಆಡುತ್ತಿಲ್ಲ. ಗಾಯದಿಂದಾಗಿ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರ ಗೈರಿನಲ್ಲಿ ಮಿಂಚುವ ಅವಕಾಶ ಹೊಸಬರಿಗೆ ಇದೆ. ಈ ಸರಣಿ ಲಂಡನ್ನಲ್ಲಿ 2026ರ ಜೂನ್ನಲ್ಲಿ ಆರಂಭವಾಗಲಿರುವ ಮಹಿಳಾ ವಿಶ್ವಕಪ್ಗೆ ಪೂರ್ವಭಾವಿ ಅಭ್ಯಾಸವೆಂದು ಪರಿಗಣಿಸಲಾಗಿದೆ.