ಪ್ರಜ್ಞಾನಂದ ಭಾರತದ ನಂಬರ್ 1 ಚೆಸ್‌ ಆಟಗಾರ

ನವದೆಹಲಿ: ಉಜ್‌ಚೆಸ್ ಕಪ್ ಮಾಸ್ಟರ್ಸ್‌ನ ಅಂತಿಮ ಸುತ್ತಿನಲ್ಲಿ ನೋದಿರ್ಬೆಕ್ ಅಬ್ದುಸತ್ತೊರೊವ್ ಅವರನ್ನು ಬ್ಲಾಕ್‌ನೊಂದಿಗೆ ಸೋಲಿಸುವ ಮೂಲಕ ರಮೇಶ್‌ಬಾಬು ಪ್ರಜ್ಞಾನಂದ ಲೈವ್ ರೇಟಿಂಗ್‌ನಲ್ಲಿ ಭಾರತದ ನಂ.1 ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತದ ನಂಬರ್ 1 ಚೆಸ್‌ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಉಜ್ ಚೆಸ್ ಕಪ್ ಮಾಸ್ಟರ್ಸ್ 2025 ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ 19 ವರ್ಷದ ಪ್ರಜ್ಞಾನಂದ್ ಫಿಡಾ ವಿಶ್ವ ರ್ಯಾಂಕಿಂಗ್ಸ್‌ನಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರು ಈ ವರ್ಷದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ. ಪ್ರಜ್ಞಾನಂದ ಲೈವ್ ರೇಟಿಂಗ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕದ ಚೆಸ್ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಗೆಲುವಿನಿಂದ ಪ್ರಜ್ಞಾನಂದ ಅವರ ಲೈವ್ ರೇಟಿಂಗ್ 2778.3 ಕ್ಕೆ ಏರಿತು ಮತ್ತು ಇವರು ಅಗ್ರ ಸ್ಥಾನ ಪಡೆದಿದ್ದಾರೆ.