ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ಮೋದಿ ಭಾಗಿ

0
77

ಮಾಲ್ಡೀವ್ಸ್ : ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ 60 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮಾಲ್ಡೀವ್ಸ್ ರಕ್ಷಣಾ ಪಡೆಗಳು 21-ಗನ್ ಸೆಲ್ಯೂಟ್ ಮತ್ತು ಗೌರವ ರಕ್ಷೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು.

2023ರಲ್ಲಿ ಇಂಡಿಯಾ ಔಟ್ ಅಭಿಯಾನ ಮೂಲಕ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದ ಮೊಹಮ್ಮದ್ ಮುಯಿಝು ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿತಕ್ಕೂ ಮುಂದಾಗಿದ್ದರು, ಆದರೆ ಈಗ ಮಾಲ್ಡೀವ್ಸ್‌ ಇಂದು 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೆಡ್‌ ಕಾರ್ಪೆಟ್‌ ಮೂಲಕ ಸ್ವಾಗತ ಮಾಡಿದ್ದು ಅದ್ಭುತ ಮಿಲಿಟರಿ ಮೆರವಣಿಗೆಯು ದೇಶದ ಶಕ್ತಿ, ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸಿತು. ಪ್ರದರ್ಶನಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಕಳೆದ ಆರು ದಶಕಗಳಲ್ಲಿ ಅದರ ಗಮನಾರ್ಹ ಪ್ರಯಾಣವನ್ನು ಸುಂದರವಾಗಿ ಚಿತ್ರಿಸಿದವು.

ಅದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್ ಉಪಾಧ್ಯಕ್ಷ ಹುಸೇನ್ ಮೊಹಮ್ಮದ್ ಲತೀಫ್ ಅವರೊಂದಿಗೆ ಸಭೆ ನಡೆಸಿದರು. ಮೂಲಸೌಕರ್ಯ, ತಂತ್ರಜ್ಞಾನ, ಹವಾಮಾನ ಬದಲಾವಣೆ, ಇಂಧನ ಮತ್ತು ಇತರ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿ ಭಾರತ-ಮಾಲ್ಡೀವ್ಸ್ ಸ್ನೇಹದ ಪ್ರಮುಖ ಸ್ತಂಭಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಉಭಯ ರಾಷ್ಟ್ರಗಳ ನಡುವಿನ ನಿಕಟ ಸಹಯೋಗವು ಅವರ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಮತ್ತು ಮುಂಬರುವ ವರ್ಷಗಳಲ್ಲಿ ಎರಡೂ ದೇಶಗಳು ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಗಾಢವಾಗಿಸಲು ಎದುರು ನೋಡುತ್ತಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ, ಪ್ರತ್ಯೇಕ ಸಭೆಯಲ್ಲಿ, ಪ್ರಧಾನಿ ಮೋದಿ ಅವರು ಪೀಪಲ್ಸ್ ಮಜ್ಲಿಸ್ (ಮಾಲ್ಡೀವ್ಸ್ ಪಾರ್ಲಿಮೆಂಟ್) ಸ್ಪೀಕರ್ ಅಬ್ದುಲ್ ರಹೀಂ ಅಬ್ದುಲ್ಲಾ ಅವರೊಂದಿಗೆ ಚರ್ಚೆ ನಡೆಸಿದರು.

ಮಾಲ್ಡೀವ್ಸ್‌ಗೆ 4,850 ಕೋಟಿ ರೂ. ಮೌಲ್ಯದ ಹೊಸ ಲೈನ್ ಆಫ್ ಕ್ರೆಡಿಟ್ (ಎಲ್‌ಒಸಿ) ವಿಸ್ತರಿಸುವ ಒಪ್ಪಂದಕ್ಕೂ ಪ್ರಧಾನಿ ಮೋದಿ ಸಹಿ ಹಾಕಿದರು. ಇದಲ್ಲದೆ, ಹಿಂದಿನ ಭಾರತೀಯ ಅನುದಾನಿತ ಎಲ್‌ಒಸಿಗಳ ಮೇಲಿನ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡಲು ತಿದ್ದುಪಡಿ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಇದು ರಾಷ್ಟ್ರಕ್ಕೆ ಮತ್ತಷ್ಟು ಆರ್ಥಿಕ ಪರಿಹಾರವನ್ನು ಒದಗಿಸಿತು.

ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕುರಿತ ಒಪ್ಪಂದಗಳು, ಭಾರತದ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ ಮತ್ತು ಮಾಲ್ಡೀವ್ಸ್ ಹವಾಮಾನ ಸೇವೆಗಳ ನಡುವಿನ ಹವಾಮಾನ ಸಹಯೋಗ ಮತ್ತು ಡಿಜಿಟಲ್ ರೂಪಾಂತರವನ್ನು ಉತ್ತೇಜಿಸಲು ಸ್ಕೇಲೆಬಲ್ ಡಿಜಿಟಲ್ ಆಡಳಿತ ಪರಿಹಾರಗಳ ಹಂಚಿಕೆ ಸೇರಿದಂತೆ ಎರಡೂ ರಾಷ್ಟ್ರಗಳ ನಡುವೆ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದಗಳು (MoU) ಸೇರಿವೆ.

ಭಾರತದ ‘ನೆರೆಹೊರೆ ಮೊದಲು’ ನೀತಿ ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಅಭಿವೃದ್ಧಿ ಸಹಕಾರದ ಮೂಲಕ ಭಾರತ ಮಾಲ್ಡೀವ್ಸ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ದ್ವೀಪ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ಅಧ್ಯಕ್ಷ ಮುಯಿಝು ಅವರ ಆಹ್ವಾನದ ಮೇರೆಗೆ ಆಚರಣೆಯ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಚರಣೆಯಲ್ಲಿ ಭಾಗವಹಿಸಿದ ನಂತರ ಅವರು ಭಾರತಕ್ಕೆ ಮರಳಲಿದ್ದಾರೆ.

Previous articleDharmasthala: ಎಸ್‌ಐಟಿ ಮುಂದೆ ಬಂದ ದೂರುದಾರ, ಅನಾಮಿಕ ವ್ಯಕ್ತಿ
Next articleKodi Mutt Swamiji: ಕೋಡಿಮಠ ಶ್ರೀ ಆಶೀರ್ವಾದ ಪಡೆದ ಡಿಕೆಶಿ, ತಾಳೆಗರಿ ಭವಿಷ್ಯ!

LEAVE A REPLY

Please enter your comment!
Please enter your name here