ದಾಂಡೇಲಿ: ಎಂ.ಎಂ ಈಕ್ವಿಟಿ ಮತ್ತು ಮಾಸ್ಟರ್ ಮನಿ ಆ್ಯಪ್ಗಳಿಂದ ಜನರು ಮೋಸ ಹೋಗದಂತೆ ದಾಂಡೇಲಿ ಪೋಲಿಸರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ನಗರ ಠಾಣೆಯಪಿ.ಎಸ್.ಐ.ಗಳಾದ ಅಮೀನ್ ಅತ್ತಾರ, ಕಿರಣ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದು ಈ ಎರಡು ಆ್ಯಪ್ಗಳನ್ನು ಮೊಬೈಲ್ ಪ್ಲೆ ಸ್ಟೋರ್ನಿಂದ ಡೌನ್ ಲೋಡ್ ಮಾಡಿಕೊಂಡು ನಗರದಲ್ಲಿ ಅನೇಕರು ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಆ್ಯಪ್ಗೆ ಸಂಭಂಧಿಸಿದಂತೆ ಪ್ರತ್ಯೇಕ ವಾಟ್ಸಪ್ ಗ್ರೂಪ್ಗಳನ್ನು ಮಾಡಿ ಇದು ಕ್ರಿಪ್ಟೋ ಕರೆನ್ಸಿ ಮತ್ತು ಕ್ರೂಡ್ ಆಯಿಲ್ ಹಾಗೂ ಇನ್ನಿತರೆ ಕಡೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಕೊಡಲಾಗುತ್ತದೆಂದು ಆಮಿಷವೊಡ್ಡಿ ಜನರನ್ನು ನಂಬಿಸಿ ಮೋಸಗೊಳಿಸಲಾಗುತ್ತಿದೆ.
ಈ ಆ್ಯಪ್ ಸೆಬಿ ಅಥವಾ ಆರ್.ಬಿ.ಐ.ನಲ್ಲಿ ನೊಂದಣಿಯಾಗಿಲ್ಲ. ಇದರ ವ್ಯವಹಾರವೆಲ್ಲ ಸಂಪೂರ್ಣ ನಿಯಮ ಬಾಹಿರವಾಗಿದ್ದು ಸಾರ್ವಜನಿಕರು ಈ ಆ್ಯಪ್ನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು. ಬಳಸಬಾರದು, ಹಣ ಹೂಡಿಕೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದು, ಈ ಆ್ಯಪ್ನಿಂದ ವೈಯುಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.