ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು…

ರಾಮನಗರ: ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವ್ರನ್ನೂ ಹೆದರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಆಡಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ? ನಿನಗೆ ನೈತಿಕತೆ ಇದ್ಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.