ಹೊಯ್ಸಳ ವಿಜಯ್ ಹೊಸ ಚಿತ್ರ ಶುರು

0
34

ರಗಡ್ ಲುಕ್’ನಲ್ಲಿ ಹೇಮಂತ್

‘ಆಲ್ಫಾ -ಮೆನ್ ಲವ್ ವೈಲೆನ್ಸ್’ ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಹೇಮಂತ್ ಕಮಾರ್ ಎಂಟ್ರಿ ಕೊಟ್ಟಿದ್ದಾರೆ.

ಈ ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಅಪ್ಪ ಮತ್ತು ಮಗನ ಎಮೋಷನ್ ಕೂಡ ಇರಲಿದೆಯಂತೆ. ಗೀತಾ ಮತ್ತು ಹೊಯ್ಸಳ ಖ್ಯಾತಿಯ ವಿಜಯ್ ನಿರ್ದೇಶನದ 3ನೇ ಸಿನಿಮಾವಿದು.

ಸದ್ಯ ಸಿನಿಮಾದ ಮೊದಲ ಲುಕ್ ರಿಲೀಸ್ ಆಗಿದ್ದು, ನಾಯಕ ಹೇಮಂತ್ ರಗಡ್ ಗೆಟಪ್ ಗಮನ ಸೆಳೆಯುತ್ತಿದೆ.

ಈ ಸಿನಿಮಾದಲ್ಲಿ ಮೂರು ಪಾತ್ರಗಳು ಡಾಮಿನೇಟ್ ಮಾಡುವುದರಿಂದ ಸಿನಿಮಾಗೆ ಆಲ್ಫಾ ಎಂದು ಟೈಟಲ್ ಇಡಲಾಗಿದೆ. ಮೆನ್ ಲವ್ ವೈಲನ್ಸ್ ಎಂಬುದು ಅಡಿಬರಹ.

ಎಲ್ ಎ ಬ್ಯಾನರ್ ಆನಂದ್ ಕುಮಾರ್ ಆಲ್ಫಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಹೀರೋ ಆಗಿ ಎಂಟ್ರಿ ಕೊಡುತ್ತಿರುವ ನಾಯಕ ಹೇಮಂತ್ ಕುಮಾರ್ ಈ ಸಿನಿಮಾಗಾಗಿ ಫುಲ್ ತಯಾರಿಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ಆಕ್ಟಿಂಗ್ ತಯಾರಿ ನಡೆಸಿದ್ದಾರೆ. ಅರ್ಜುನ್ ಅವರ ಜೊತೆ ಫೈಟ್ ಅಭ್ಯಾಸ ಮಾಡಿದ್ದಾರೆ, ಭೂಷಣ್ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತಿದ್ದಾರೆ.

ಕಾರ್ತಿಕ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಡೈಲಾಗ್ ಈ ಸಿನಿಮಾಗಿದೆ.

Previous articleಏಪ್ರಿಲ್ 10ಕ್ಕೆ ‘ವಾಮನ’ ಆಗಮನ
Next articleಘಾಟ್ ತಿರುವಿನಲ್ಲೇ ಬಸ್ ಸ್ಟೇರಿಂಗ್ ಕಟ್