ಬೆಳಗಾವಿ: ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು ಸಂಸದ ಜಗದೀಶ ಶೆಟ್ಟರ್ ಹಾಗೂ ಇತರೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಬಂದು 3 ತಿಂಗಳಾಯತು ಹಳೆಯದು ನಂಗೊತ್ತಿಲ್ಲ, ಹಳೆಯದನ್ನೇ ಕೆದಕಿ ಕೆಲಸ ಮಾಡಲಾಗುವುದಿಲ್ಲ, ಬೆಂಗಳೂರು–ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ಏನು ತಾಂತ್ರಿಕ ಕಾರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಆಗ ನಾನು ಸಚಿವನಾಗಿರಲಿಲ್ಲ. ಆದರೆ ಶಿಘ್ರದಲ್ಲಿ ಬೆಳಗಾವಿಗೆ ಮತ್ತೊಂದು ವಂದೇ ಭಾರತ್ ಬರಲಿದೆ ಎಂದಿದ್ದಾರೆ. ಪುಣೆ-ಹುಬ್ಬಳ್ಳಿ ಮತ್ತು ಪುಣೆ–ಕೊಲ್ಹಾಪುರ ಮಧ್ಯೆ ವಂದೇ ಭಾರತ್ ರೈಲಿನ ಸಂಚಾರ ಇಂದು ಆರಂಭವಾಗಲಿದ್ದು. ಕೊಲ್ಹಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದರು.