ಭೀಮಾನದಿಯಲ್ಲಿ ಇಬ್ಬರು ಯುವಕರು ನೀರು ಪಾಲು: ಮುಂದುವರೆದ ಶೋಧ ಕಾರ್ಯ

ಯಾದಗಿರಿ: ವಡಗೇರಾ ತಾಲೂಕಿನ ಮಾಚನೂರು ಗ್ರಾಮದ ಇಬ್ಬರು ಯುವಕರು ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ರಮೇಶ (17) ಮತ್ತು ಸಿದ್ದಪ್ಪ (20) ಎಂಬುವವರೇ ಮಾಚನೂರು ಗ್ರಾಮದ ಬಳಿ ಹರಿಯುವ ಭೀಮಾ ನದಿಯಲ್ಲಿ ನೀರು ಕುಡಿಯಲು ಇಳಿದಾಗ ನದಿಯೊಳಗೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಇಬ್ಬರು ಯುವಕರು ದನ ಕಾಯಲು ಹೋದಾಗ ನೀರಿಗೆ ಇಳಿದಾಗ ರಭಸದಿಂದ ಬಂದ ನೀರಿಗೆ ಒತ್ತಡಕ್ಕೆ ಸಿಕ್ಕು ಕೊಚ್ಚಿಹೊಗಿದ್ದಾರೆಂದು ಹೇಳಲಾಗುತ್ತಿದೆ.ನದಿಯ ದಂಡೆಯಲ್ಲಿ ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ವಡಗೇರಾ ತಹಸಿಲ್ದಾರರು, ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಶೋಧ ಕಾರ್ಯ ನಡೆಸಿದ್ದಾರೆ.