ಅಕ್ರಮ ಸಂಬಂಧ: ಆಪ್ತಮಿತ್ರನ ಕೊಲೆ

ಸಂ.ಕ ಸಮಾಚಾರ ಕಲಬುರಗಿ : ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ ಸ್ನೇಹಿತನನ್ನು ವಿದ್ಯುತ್ ವೈಯರ್‌ನಿಂದ ಕತ್ತು ಬಿಗಿದು ಆಪ್ತ ಸ್ನೇಹಿತನ ಮರ್ಡರ್ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ.
ವೈರ್​ನಿಂದ ಕತ್ತಿಗೆ ಬಿಗಿದು ಅಂಬರೀಶ್(28) ನನ್ನ ಅಜಯ್ ಹತ್ಯೆಗೈದಿದ್ದಾನೆ.​ ಕೊಲೆ ಮಾಡಿದ ಅಜಯ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದ ನಿವಾಸಿ ಅಂಬರೀಶ್ ಗವನಹಳ್ಳಿ (20) ಕೊಲೆಯಾದ ಯುವಕವೆಂದು ತಿಳಿದು ಬಂದಿದೆ. ಸ್ನೇಹಿತ ಅಜಯ್ ಪತ್ನಿ ಜೊತೆ ಕಳೆದ ಅನೇಕ ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಅಂಬರೀಶ್ ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಪಿಜಿ ಯೊಂದರಲ್ಲಿ ಫುಡ್ ಸಪ್ಲೇ ಕೆಲಸ ಮಾಡಿಕೊಂಡಿದ್ದನು.

ಅಂಬರೀಶ್ ಮತ್ತು ಅಜಯ್ ಸುಮಾರು 7-8 ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು, ಅಜಯ್ ಆಟೋ ಚಾಲಕನಾಗಿದ್ದ, ಅಂಬರೀಶ್ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಅಜಯ್ ಗೆ ಇಬ್ನರು ಮಕ್ಕಳಿದ್ದರು ಆತನ ಹೆಂಡತಿ (ಲಕ್ಷ್ಮೀ) ಅಂಬರೀಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಸ್ನೇಹಿತನ ಜೊತೆ ಹೆಂಡತಿಯ ಅನೈತಿಕ ಸಂಬಂಧದಿಂದ ಕುಪಿತಗೊಂಡಿದ್ದ ಅಜಯ್ ಅಂಬರೀಶನನ್ನ ಬೆಂಗಳೂರಿನಿಂದ ಮುರುಡಿ ಗ್ರಾಮಕ್ಕೆ ಕರೆದುಕೊಂಡು ಬಂದು ಮರ್ಡರ್ ಮಾಡಿದ್ದಾನೆ, ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.