ಬೆಳಗಾವಿ: ಬೆಳಗಾವಿ ನಗರದ ಹೊರ ವಲಯದಲ್ಲಿರುವ ಭೂತರಾಮನಹಟ್ಟಿಯಲ್ಲಿ ಹುಲಿಯೊಂದು ಪ್ರತ್ಯೇಕ್ಷಗೊಂಡಿದೆ.
ಹುಲಿ ಕಂಡು ಬಂದ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಗಡೆ ಬೇಕಾಬಿಟ್ಟಿ ತಿರುಗಾಡದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗಳವಾರ ರಾತ್ರಿ ಡಂಗುರ ಸಾರಿದ್ದಾರೆ. ಕೆಲ ತಿಂಗಳುಗಳ ಹಿಂದೆ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಮೃಗಾಲಯದಿಂದ ಪ್ರಾಣಿ ತಪ್ಪಿಸಿಕೊಂಡಿದ್ದು. ಈಗ ಪ್ರತ್ಯೇಕವಾದ ವಾಘ್ರ ಮೃಗಾಲಯದ್ದೋ ಅಥವಾ ಕಾಡಿನಿಂದ ಬಂದಿದ್ದೋ ಎನ್ನುವುದನ್ನು ಅರಣ್ಯ ಇಲಾಖೆಯ ಸ್ಪಷ್ಟಿಕರಣ ನೀಡಬೇಕಿದೆ.
ಅರಣ್ಯ ಇಲಾಖೆಯ ಡಂಗುರದಿಂದ ಬೆಚ್ಚಿ ಬಿದ್ದಿರುವ ಭೂತರಾಮನಹಟ್ಟಿಯ ಜನರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ, ಕಳೆದ ಎರಡು ವರ್ಷದ ಹಿಂದೆ ಚಿರತೆಯೊಂದು ಇದೇ ರೀತಿ ಹಿಂಡಲಗಾ ಪ್ರದೇಶದಲ್ಲಿ ಕಂಡುಬಂದು ತಿಂಗಳ ಕಾಲ ಬೆಳಗಾವಿಗರನ್ನು ಭಯಭೀತರನ್ನಾಗಿಸಿತ್ತು.