ಬೆಳಗಾವಿ: ನಗರದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ತೀವ್ರ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಮೃತರನ್ನುಜೋಷಿಮಾಳಾ ನಿವಾಸಿಗಳಾದ ಸಂತೋಷ ಕುರಡೇಕರ್ ( 44) , ಸುವರ್ಣ ಕುರಡೇಕರ್ , ಹಾಗೂ ಪುತ್ರಿ ಮಂಗಳಾ ಕುರಡೇಕರ್ ಎಂದು ಗುತಿಸಲಾಗಿದ್ದು, ತೀವ್ರ ಅಸ್ವಸ್ಥಗೊಂಡಿರುವ ಮತ್ತೋರ್ವ ಪುತ್ರಿ ಸುನಂದ ಕುರಡೇಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆಯ ಉಪಹಾರದಲ್ಲಿ ವಿಷ ಬೆರೆಸಿ ಸೇವಿಸಿರುವ ಶಂಕೆ ಮೂಡಿದ್ದು, ಈ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಶಹಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.