ಮಾಸ್ಕೋ: ಚೀನಾದ ಗಡಿಯಲ್ಲಿ ರಷ್ಯಾದ 50 ಪ್ರಯಾಣಿಕರಿದ್ದ ವಿಮಾನ ನಾಪತ್ತೆಯಾಗಿತ್ತು. ರಕ್ಷಣಾ ಹೆಲಿಕಾಪ್ಟರ್ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಅವಶೇಷಗಳನ್ನು ಪತ್ತೆ ಹಚ್ಚಿವೆ. ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಗುರುವಾರ ಆನ್-24 ವಿಮಾನ ಹಾರಾಟದ ವೇಳೆ ವಾಯು ಸಂಚಾರ ನಿಯಂತ್ರಣ ಕೊಠಡಿ ಸಂಪರ್ಕವನ್ನು ಕಳೆದುಕೊಂಡು ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ ಮಹಿಳೆಯರು, ಮಕ್ಕಳು ಸೇರಿ 50 ಪ್ರಯಾಣಿಕರಿದ್ದರು.
ಈ ವಿಮಾನ ಅಂಗಾರ ಏರ್‌ಲೈನ್ಸ್ ಸಂಸ್ಥೆಗೆ ಸೇರಿದೆ. ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕವನ್ನು ಕಳೆದುಕೊಂಡಿದೆ. ಅಮುರ್‌ನ ಟಿಂಡಾ ನಗರಕ್ಕೆ ವಿಮಾನವು ಹೊರಟಿತ್ತು.
ಅಮುರ್ ಪ್ರದೇಶವು ಚೀನಾ ದೇಶದ ಗಡಿ ಭಾಗದಲ್ಲಿದೆ. ನಿಗದಿತ ನಿಲ್ದಾಣಕ್ಕಿಂತ ಕೆಲವೇ ಕಿ. ಮೀ. ದೂರದಲ್ಲಿದ್ದಾಗ ವಿಮಾನ ಸಂಪರ್ಕವನ್ನು ಕಳೆದುಕೊಂಡು ಪತನಗೊಂಡಿದೆ.
ವಿಮಾನ ಸಂಪರ್ಕ ಕಳೆದುಕೊಂಡ ಮಾಹಿತಿ ತಿಳಿದ ತಕ್ಷಣ ಹೆಲಿಕಾಪ್ಟರ್ ಮೂಲಕ ಹುಡುಕಾಟವನ್ನು ಪ್ರಾರಂಭಿಸಲಾಯಿತು. ರಕ್ಷಣಾ ಹೆಲಿಕಾಪ್ಟರ್ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಪತ್ತೆ ಹಚ್ಚಿದೆ.
ರಷ್ಯಾದ ಸುದ್ದಿ ಸಂಸ್ಥೆಗಳು ವಿಮಾನ ಎರಡು ಬಾರಿ ಲ್ಯಾಂಡ್ ಆಗಲು ಪ್ರಯತ್ನವನ್ನು ನಡೆಸಿತು. ವಿಮಾನ ನಿಲ್ದಾಣಕ್ಕೆ ಮರಳಲು ಪ್ರಯತ್ನ ನಡೆಸಿ ವಿಫಲಗೊಂಡು ಪತನಗೊಂಡಿತು.
ವಿಮಾನದಲ್ಲಿ 43 ಪ್ರಯಾಣಿಕರು ಇದ್ದರು. 5 ಮಕ್ಕಳು, 6 ಸಿಬ್ಬಂದಿಗಳಿದ್ದರು. ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕಾಗಿ ಎಲ್ಲಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಮುರ್ ಪ್ರದೇಶದಲ್ಲಿಯೇ ಮೂವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿ ಪತನಗೊಂಡಿತ್ತು. ಈ ಪ್ರದೇಶ ಮಾಸ್ಕೋದಿಂದ 6,600 ಕಿ.ಮೀ. ದೂರದಲ್ಲಿದೆ.
ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಅಂದಾಜಿಸಲಾಗಿದೆ. ಒಂದು ಕಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎಷ್ಟು ಪ್ರಯಾಣಿಕರು ಮೃತಪಟ್ಟಿದ್ದಾರೆ? ಎಂದು ತಿಳಿದುಬಂದಿಲ್ಲ.
ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿಯೇ ವಿಮಾನ ಸಂಪರ್ಕ ಕಳೆದುಕೊಂಡು ಬಳಿಕ ಪತನಗೊಂಡಿದೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಪ್ರಯಾಣಿಕರ ವಿವರ ಮತ್ತು ಘಟನೆ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.