ಮಂತ್ರಾಲಯದ ಶ್ರೀ ರಾಯರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ರಾಯಚೂರು; ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ದರ್ಶನಕ್ಕಾಗಿ ಭಕ್ತ ಸಾಗರವೇ ಗುರುವಾರ ಹರಿದು ಬಂದಿದೆ.
ವಿಶೇಷವಾಗಿ ಗುರುವಾರ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಬೆಳಿಗ್ಗೆಯಿಂದಲೇ ಶ್ರೀಮಠದ ಆವರಣ(ಕಾರಿಡಾರ್)ದಿಂದ ಭಕ್ತರು ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ
ಭಕ್ತರು ಶ್ರೀಮಠಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಶ್ರೀಮಠದ ಪ್ರಾಕಾರದಲ್ಲಿ ಭಕ್ತರಿಗೆ ಹೆಜ್ಜೆ ನಮಸ್ಕಾರ ಹಾಗೂ ಉರುಳು ಸೇವೆ ಮಾಡದಂತೆ ಭಕ್ತರಿಗೆ ಧ್ವನಿವರ್ಧಕ ಮೂಲಕ ಸೂಚನೆ ನೀಡಲಾಗುತ್ತಿತ್ತು.