ಮಂತ್ರಾಲಯ: ಅದ್ದೂರಿಯಾಗಿ ನೆರವೇರಿದ ರಾಯರ ರಥೋತ್ಸವ

0
76

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 354ನೇ ಉತ್ತರಾಧನೆ ಅಂಗವಾಗಿ ಮಂಗಳವಾರ ರಥದಲ್ಲಿ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನಿರಿಸಿ ರಥೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶವನ್ನು ನೀಡಿದ ಬಳಿಕ ಚಾಲನೆ ನೀಡಿದರು.

ಆರಾಧನಾ ಮಹೋತ್ಸವದ ಕೊನೆಯ ಘಟ್ಟ ಉತ್ತರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಇಂದು ಮಹಾರಥೋತ್ಸವ ಜರುಗಿತು. ರಾಯರ ಉತ್ತರಾರಾಧನೆ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಯರು ಪ್ರಹ್ಲಾದ ರಾಜರ ಉತ್ಸವಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನುವ ಪ್ರತೀತಿ ಇದೆ.

ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರಾರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನುವ ನಂಬಿಕೆ ಇದೆ. ಹೀಗಾಗಿ ಉತ್ತರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಆಗಮಿಸಿ ಮಹಾ ರಥೋತ್ಸವದಲ್ಲಿ ಭಾಗಿ ಆಗುತ್ತಾರೆ. ಪ್ರಹ್ಲಾದ ರಾಜ ಉತ್ಸವ ಮೂರ್ತಿಯನ್ನು ಸಂಸ್ಕೃತ ವಿದ್ಯಾಪಾಠ ಶಾಲೆವರೆಗೂ ವಿವಿಧ ವಾದ್ಯ ಮೇಳಗಳೊಂದಿಗೆ ಕರೆದೊಯ್ದು ಮರಳಿ ಮಠಕ್ಕೆ ಕರೆ ತರಲಾಯಿತು.

ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ: ಮಠದ ಮುಂದಿನ ಮಧ್ವ ಮಾರ್ಗದಲ್ಲಿ ರಥೋತ್ಸವ ಜರುಗಿತು. ಇದಕ್ಕೂ ಮುನ್ನ ಉತ್ತಾರಾರಾಧನೆ ಪ್ರಯುಕ್ತ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ರಾಯರ ಮೂಲ ಬೃಂದಾವನಕ್ಕೆ ವಜ್ರಖಚಿತ ಕವಚವನ್ನು ಭಕ್ತರೊಬ್ಬರು ಕೊಡುಗೆ ನೀಡಿದ್ದು ವಿಶೇಷವಾಗಿತ್ತು.ಮಹಾ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಠಿ ನೆರ ವೇರಿಸಲಾಯಿತು. ಅಲ್ಲದೇ ಡ್ರೋಣ ಮೂಲಕ ಹೂಗಳನ್ನು ಹಾಕಲಾಯಿತು.

ಮಂತ್ರಾಲಯದ ರಾಯರ ಮೂಲ ಬೃಂದಾವನಕ್ಕೆ ಭಕ್ತರೊಬ್ಬರು ಕೊಡುಗೆ ನೀಡಿದ ವಜ್ರಖಚಿತ ಕವಚ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಎಲ್ಲರಿಗೂ ಗುಲಾಲ್ ಎರಚುವ ಮೂಲಕ ವಸಂತೋತ್ಸವ ಆಚರಿಸಿ ರಂಗಿನ ಹಬ್ಬ ವಸಂತೋತ್ಸವ ಆಚರಿಸಿದರು. ತದನಂತರ ಪ್ರಹ್ಲಾದರಾಜ ಉತ್ಸವ ಮೂರ್ತಿಯನ್ನು ಶ್ರೀಮಠದ ಪ್ರಕಾರಾದಲ್ಲಿ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ರಥದಲ್ಲಿ ಇರಿಸಲಾಯಿತು.

ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ: ರಥಬೀದಿಯಲ್ಲಿ ಲಕ್ಷಾಂತರ ಭಕ್ತರ ನಡುವೆ ಅದ್ದೂರಿಯಾಗಿ ರಥೋತ್ಸವ ಜರುಗಿಸಲಾಯಿತು. ಈ ಬಾರಿಯೂ ಹೆಲಿಕಾಪ್ಟರ್ ಹಾಗೂ ಬೃಹತ್ ಡೋನ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ‘ರಾಘವೇಂದ್ರ ಸ್ವಾಮಿಗಳು ತಮ್ಮ ಯೋಗ ಶಕ್ತಿಯಿಂದ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ನಾಸ್ತಿಕ ಜಗತ್ತಿನಲ್ಲಿಯೂ ಆಸ್ತಿಕತೆಯನ್ನು ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದರು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟಿ ಪಂಡಿತ ರಾಜಾರಾಮ ಶುಕ್ಲ ಅವರಿಗೆ ₹1.50 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ, ಕೊಯಮತ್ತೂರಿನ ಲೆಕ್ಕ ಪರಿಶೋಧಕ ಪಿ.ಆರ್.ವಿಠಲ್ ಅವರಿಗೆ ₹1 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ, ಶಾಲು ಫಲಮಂತ್ರಾಕ್ಷತೆ ನೀಡಿದರು.

Previous articleಬೆಂಗಳೂರು-ಬೆಳಗಾವಿ ವಂದೇ ಭಾರತ್ ವೇಳಾಪಟ್ಟಿ ಬದಲು?
Next articleಕಿತ್ತೂರು, ಕಲ್ಯಾಣ ಕರ್ನಾಟಕ ಸಂಪರ್ಕದ ರೈಲ್ವೆ ಯೋಜನೆ ಅಪ್‌ಡೇಟ್

LEAVE A REPLY

Please enter your comment!
Please enter your name here