‘ಜೂನಿಯರ್’ ಝಲಕ್: ಜುಲೈ 18ಕ್ಕೆ ಕಿರೀಟಿ ದರ್ಬಾರ್

ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಜುಲೈ 18ರಂದು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ‘ಜೂನಿಯರ್’ ದರ್ಶನವಾಗಲಿದೆ. ಟೀಸರ್ ಮೂಲಕ ಭರವಸೆ ಹುಟ್ಟಿಸಿದ್ದ ಚಿತ್ರತಂಡ, ಇದೀಗ ಟ್ರೇಲರ್ ಬಿಡುಗಡೆ ಮಾಡಿದೆ. ಆಕ್ಷನ್ ಎಮೋಷನ್, ಲವ್, ಫ್ಯಾಮಿಲಿ, ಸ್ಟುಡೆಂಟ್ ಲೈಫ್… ಹೀಗೆ ಎಲ್ಲಾ ಅಂಶವನ್ನು ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

‘ಜೂನಿಯರ್’ ಮೂಲಕ ಕಿರೀಟಿ ಆಲ್‌ರೌಂಡರ್ ಆಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದು ಟ್ರೇಲರ್ ಮೂಲಕ ರುಜುವಾಗಿದೆ. ಡಾನ್ಸ್, ಫೈಟ್ ಮತ್ತು ತಮ್ಮ ಪಾತ್ರಕ್ಕೆ ಅಗತ್ಯವಾದ ಮನೋಭಾವವನ್ನು ಸುರಿಸಿದ್ದಾರೆ ಕಿರೀಟಿ. ಹಾಸ್ಯದಿಂದಲೂ ಮನರಂಜಿಸಿರುವುದು ಅವರ ಹೆಚ್ಚುಗಾರಿಕೆ. ನಾಯಕಿಯಾಗಿ ಶ್ರೀಲೀಲಾ ಇದ್ದಾರೆ. ಕಿರೀಟಿ ತಂದೆ-ತಾಯಿಯಾಗಿ ರವಿಚಂದ್ರನ್ ಹಾಗೂ ಸುಧಾರಾಣಿ ಸಾಥ್ ಕೊಟ್ಟಿದ್ದಾರೆ.

ಜೆನಿಲಿಯಾ ಡಿಸೋಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾವ್ ರಮೇಶ್, ಅಚ್ಯುತ್ ಕುಮಾರ್, ಸತ್ಯ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ. ನಿರ್ದೇಶಕ ರಾಧಾ ಕೃಷ್ಣ ಕಂಪ್ಲೀಟ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಮೂಲಕ ‘ಜ್ಯೂನಿಯರ್’ನನ್ನು ಕಟ್ಟಿಕೊಡಲು ಮುಂದಾಗಿರುವುದು ಟ್ರೇಲರ್‌ನಲ್ಲಿ ಗೋಚರಿಸುತ್ತದೆ. ಕೆ.ಕೆ.ಸೆಂಥಿಲ್ ಕುಮಾರ್ ಛಾಯಾಗ್ರಹಣ, ದೇವಿಶ್ರೀ ಪ್ರಸಾದ್ ಸಂಗೀತ ಪೀಟರ್ ಹೆನ್ಸ್ ಸಾಹಸ ಈ ಚಿತ್ರಕ್ಕಿದೆ. ವಾರಾಹಿ ಚಲನಚಿತ್ರ ಬ್ಯಾನರ್‌ನಡಿ ರಜನಿ ಕೊರ್ರಪಾಟಿ ಬಂಡವಾಳ ಹೂಡಿದ್ದು, ಸಾಯಿ ಶಿವಾನಿ ಅರ್ಪಿಸುತ್ತಿದ್ದಾರೆ.