ಕಲಬುರಗಿ : ಮರಳು ಮಾಫಿಯಾ ತಡೆಯಲು ಹೋದ ಮುಖ್ಯ ಪೇದೆ ಮೇಲೆ ಟ್ರಾಕ್ಟರ ಹಾಯಿಸಿ ಭೀಕರವಾಗಿ ಕೊಲೆಗೈದಿರುವ ದಾರುಣ ಘಟನೆ ಜೇವರ್ಗಿ ತಾಲ್ಲೂಕಿನ ಹುಲ್ಲುರ್- ನಾರಾಯಣಪುರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ನೇಲೋಗಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಯೂರ ಭೀಮು ಚವ್ಹಾಣ ಕೊಲೆಗೀಡಾದ ಮುಖ್ಯ ಪೇದೆ ಎಂದು ಗುರುತಿಸಲಾಗಿದೆ.
ನಾರಾಯಣಪುರ ಗ್ರಾಮದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್ ತಪಾಸಣೆ ವೇಳೆ ಟ್ರ್ಯಾಲಿ ಟೈರನಲ್ಲಿ ಸಿಲುಕಿ ಮುಖ್ಯ ಪೇದೆ ಕೊಲೆ ಮಾಡಲಾಗಿದೆ.
ರಾತ್ರಿ ಹತ್ತು ಗಂಟೆ ಸುಮಾರಿಗೆ ತಪಾಸಣೆ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.