ಸೋನಾಲಿ ಪ್ರಕರಣ ಸಿಬಿಐಗೆ: ಸಾವಂತ್

0
10
ಸೋನಾಲಿ ಫೋಗಟ್

ಪಣಜಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣದ ತನಿಖೆಯನ್ನು ಅಂತಿಮವಾಗಿ ಸಿಬಿಐಗೆ ವಹಿಸಲಾಗುವುದು. ಈ ಕುರಿತು ಗೋವಾ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ತಿಳಿಸಿದರು. ಇದರಿಂದಾಗಿ ಸೋನಾಲಿ ಹತ್ಯೆ ಪ್ರಕರಣದ ತನಿಖೆ ಇನ್ನಷ್ಟು ವೇಗ ಪಡೆದುಕೊಳ್ಳುವಂತಾಗಿದೆ.
ಮುಖ್ಯವಾಗಿ ಸೋನಾಲಿಯ ಮಗ ಕೂಡ ಇದೇ ಬೇಡಿಕೆ ಇಟ್ಟಿದ್ದ. ತನಿಖೆಯನ್ನು ಸಿಬಿಐಗೆ ವಹಿಸುತ್ತಿರುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿಯೂ ಪ್ರಮೋದ ಸಾವಂತ್ ಮಾಹಿತಿ ನೀಡಿದರು. ನಮ್ಮ ಗೋವಾ ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಅವರ ತನಿಖೆಯೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಆದರೆ ಜನರ ಬೇಡಿಕೆಯ ಮೇರೆಗೆ ಸಿಬಿಐಗೆ ವಹಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು

Previous articleಸೆ. 14ರಂದು ರಾಣಿ ಚನ್ನಮ್ಮ ವಿವಿ ಘಟಿಕೋತ್ಸವ: ನಟ ರಮೇಶ ಅರವಿಂದಗೆ `ಗೌಡಾ’
Next article`ಕರ್ನಾಟಕ’ ಹೆಸರು ಬರಲು ದಿಗ್ಗಜ ಸಂಸ್ಥೆಗಳು ಕಾರಣ