ವಿದ್ಯುತ್ ಸ್ಪರ್ಷ: ಲೈನ್ ಮ್ಯಾನ್ ಸಾವು

0
7

ನಾಗಮಂಗಲ (ಮಂಡ್ಯ) : ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪಟ್ಟಣದ ಭೈರವೇಶ್ವರ ಬಡಾವಣೆಯ ಮೂಡ್ಲಿ ತೋಟದಲ್ಲಿ ಇಂದು ಬೆಳಿಗ್ಗೆ 8.45 ರಿಂದ 9.00 ಗಂಟೆಯ ಸುಮಾರಿನಲ್ಲಿ ವಿದ್ಯುತ್ ಸ್ಪರ್ಷದ ಅವಘಡಕ್ಕೆ ಲೈನ್ ಮ್ಯಾನ್ ಸಾವು ಸಂಭವಿಸಿರುವ ಘಟನೆ ನಡೆದಿದೆ.
ಬೆಳ್ಳೂರು ಉಪವಿಭಾಗದ ಕಚೇರಿ ವ್ಯಾಪ್ತಿಯ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಭಿಜಿತ್ (28) ಎಂಬ ನೌಕರನೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ, ಅಭಿಜಿತ್ ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದ ವಾಸಿಯಾಗಿದ್ದು, ವಿದ್ಯುತ್ ಸಂಪರ್ಕದ ಸಮಸ್ಯೆಗೆ ತೆಂಗಿನ ಗರಿ ತೆಗೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಲೈನ್ ಮ್ಯಾನ್ ಅಭಿಜಿತ್ ಇಲಾಖೆಯ ಗಮನಕ್ಕೆ ತಾರದೆ ಎಲ್ ಸಿ ತೆಗೆದುಕೊಳ್ಳದೆ ಗರಿ ತೆಗೆಯಲು ಹೋದಾಗ ಈ ಅವಘಡ ಸಂಭವಿಸಿದೆ. ವಿಷಯ ತಿಳಿದು ಸ್ಥಳೀಯ ಪೊಲೀಸರು ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ಮರಣೋತ್ತರ ಪರೀಕ್ಷೆಗಾಗಿ ಬಿಜಿ ನಗರದ ಏಮ್ಸ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹದ ರವಾನೆ ಮಾಡಿದ್ದಾರೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮುಗಿದ ಸಾಕ್ಷ್ಯ
Next articleಬೆಂಬಲ ಬೆಲೆ ಯೋಜನೆ: ರೈತರಿಗೆ ಸಮರ್ಪಕವಾಗಿ ಹಣ