ಚಿತ್ರದುರ್ಗ: ಯುವಕನನ್ನ ಹತ್ಯೆ ಮಾಡಿ ಮಣ್ಣಲ್ಲಿ ಹೂತಿಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇತ್ತಿಚೆಗೆ ನಾಪತ್ತೆಯಾಗಿದ್ದ ಯುವಕ ಗುರುಕಿರಣ್(20) ಶವ ತಾಲೂಕಿನ ಕೆನ್ನೇಡ್ಲು ಗ್ರಾಮದ ಬಳಿ ಪತ್ತೆಯಾಗಿದೆ.
ರಮೇಶನ ಪುತ್ರ ಗೋಪಿ ಎಂಬುವವನ ಮೇಲೆ ಗುರುಕಿರಣ್ ಹಲ್ಲೆ ಮಾಡಿದ್ದು ಇದರಿಂದ ಗೋಪಿ ಕಣ್ಣು ಕಳೆದುಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಮತ್ತಿತರರು ಗುರುಕಿರಣ್ ಹತ್ಯೆ ಮಾಡಿ ಮಣ್ಣಲ್ಲಿ ಹೂತಿಟ್ಟಿದ್ದರು. ಇದೀಗ ಆರೋಪಿಗಳಾದ ರಮೇಶ, ಸೋಮ, ವಿರುಪಾಕ್ಷನನ್ನ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಚಿತ್ರದುರ್ಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.