ಬೆಂಗಳೂರು: ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ,
ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು #PGCET-25 #ME, #M.Tech ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಮಾತ್ರ ಈ ಬಾರಿ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (#CBT) ನಡೆಸಲು #KEA ತೀರ್ಮಾನಿಸಿದೆ. ಜೂನ್ 2ರಂದು ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಮೇ 26, 27ರಂದು ಅಣಕು ಪರೀಕ್ಷೆ ಇರುತ್ತದೆ ಎಂದು ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂ.ಇ. / ಎಂಟೆಕ್ ಕಂಪ್ಯೂಟರ್ ಕೋರ್ಸಿಗೆ ಪುವೇಶ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತದೆ. ಪರೀಕ್ಷಾ ಕೇಂದ್ರದ ಸ್ಥಳ ಮತ್ತು ವಿವರಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದಿರುವ ಪ್ರಾಧಿಕಾರವು, ಅದೀಕೃತ ವೆಬ್ ಸೈಟಿನಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿದ ನಂತರ ಅಭ್ಯರ್ಥಿಗಳಿಗೆ ಪ್ರಾಯೋಗಿಕವಾಗಿ ಪರೀಕ್ಷೆ ಕುರಿತು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಲಿಂಕ್ ಅನ್ನು ನೀಡಲಾಗುವುದು. ಅಭ್ಯರ್ಥಿಗಳು ಲಿಂಕ್ ಅನ್ನು ಆಯ್ಕೆ ಮಾಡಿ Practice ಮಾಡಬಹುದು ಎಂದು ತಿಳಿಸಿದೆ.