ನವದೆಹಲಿ: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆ ಭಾರತಿ ಏರ್‌ಟೆಲ್ ಒಪ್ಪಂದದ ಬೆನ್ನಲ್ಲೇ ಇಂದು ಜಿಯೋ ಪ್ಲಾಟ್ಫಾರ್ಮ್ಸ್ ಸಹ ಒಪ್ಪಂದ ಮಾಡಿಕೊಂಡಿವೆ.
ನಿನ್ನೆ ಮಂಗಳವಾರ ಮಾ. 11ರಂದು ಏರ್‌ಟಿಲ್ ಸಂಸ್ಥೆ ಸ್ಟಾರ್‌ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇಂದು ಜಿಯೋ ಪ್ಲಾಟ್ಫಾರ್ಮ್ಸ್ ಕೂಡ ತಾನು ಸ್ಟಾರ್‌ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಸ್ಪೇಸ್ಎಕ್ಸ್ ಸಂಸ್ಥೆ ಸ್ವತಂತ್ರವಾಗಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದ್ದು, ಭಾರತಿಯ ಟೆಲಿಕಾಂ ಕಂಪನಿಗಳು ಒಪ್ಪಂದ ಮಾಡಿಕೊಳ್ಳುತ್ತಿವೆ, ಸೆಟಿಲೈಟ್ ಇಂಟರ್ನೆಟ್ ತಂತ್ರಜ್ಞಾನದೊಂದಿಗೆ ಇಂಟರ್ನೆಟ್ ಸರ್ವಿಸ್ ನೀಡುವ ಮೂಲಕ ಇಂಟರ್ನೆಟ್ ಪಡೆಯುವ, ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಭೂಮಿಯ ಕೆಳ ಕಕ್ಷೆಯಲ್ಲಿ ಬರೋಬ್ಬರಿ 40,000 ಪುಟ್ಟ ಪುಟ್ಟ ಸೆಟಿಲೈಟ್ಗಳನ್ನು ವಿವಿಧೆಡೆ ಕೂರಿಸಿದೆ. ಭೂಮಿಯಿಂದ ಕೇವಲ 550 ಕಿಮೀ ಎತ್ತರದಲ್ಲಿರುವ ಈ ವಿಸ್ತೃತ ಸೆಟಿಲೈಟ್ಗಳು ಬಹಳ ಪ್ರಬಲ ಇಂಟರ್ನೆಟ್ ಸರ್ವಿಸ್ ನೀಡಬಲ್ಲುವು. ಫೈಬರ್ ಇಂಟರ್ನೆಟ್ನಷ್ಟು ವೇಗ ಇಲ್ಲದಿದ್ದರೂ 250 ಎಂಬಿಪಿಎಸ್ವರೆಗೂ ಇಂಟರ್ನೆಟ್ ವೇಗ ಸಿಗುತ್ತದೆ. ಸ್ಟಾರ್‌ಲಿಂಕ್ ಸೇರ್ಪಡೆ ಇಂಟರ್ನೆಟ್ ಪ್ರವೇಶವಿಲ್ಲದ ಪ್ರದೇಶಗಳಿಗೆ ಅದರ ವ್ಯಾಪ್ತಿ ವಿಸ್ತರಿಸುತ್ತದೆ ಎನ್ನಲಾಗಿದೆ.