ಚಾಮರಾಜನಗರ: ಹಿರಿಯ ರಾಜಕಾರಣಿ ಚೌಡಹಳ್ಳಿ ಶಿವಮಲ್ಲಪ್ಪ ಅವರು ನಿಧನ ಹೊಂದಿದ್ದಾರೆ.
ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್. ನಿರಂಜನ್ಕುಮಾರ್ ಅವರ ತಂದೆ ಹಾಗೂ ಹಿರಿಯ ರಾಜಕಾರಣಿ ಚೌಡಹಳ್ಳಿ ಶಿವಮಲ್ಲಪ್ಪ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚೌಡಹಳ್ಳಿ ಶಿವಮಲ್ಲಪ್ಪ ಕಾಂಗ್ರೆಸನಿಂದ 1994 ಮತ್ತು 1999 ರಲ್ಲಿ ಪ್ರಸಾದ್ ವಿರುದ್ಧ ಸ್ಪರ್ಧಿಸಿದ್ದರು, ಆದರೆ ಎರಡೂ ಸಂದರ್ಭಗಳಲ್ಲಿ ಸೋತರು. ಪ್ರಸಾದ್ 2008 ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ, ಶಿವಮಲ್ಲಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಾಮಾಜಿಕ ಕಳಕಳಿಯೊಂದಿಗೆ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಶಿವಮಲ್ಲಪ್ಪನವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.