ಹಿಂದೂಗಳ ಧ್ವನಿ ಅಡಗಿಸಲು ನೋಟಿಸ್

ಸಂ.ಕ. ಸಮಾಚಾರ ಮೈಸೂರು: ದಕ್ಷಿಣ ಕನ್ನಡದಲ್ಲಿ ಹಿಂದೂಗಳಲ್ಲಿ ಅಭದ್ರತೆ, ಆತಂಕ ಇದೆ. ಅರುಣ್ ಪುತ್ತಿಲ್, ಕಲಡ್ಕ್ ಪ್ರಭಾಕರ್‌ಗೆ ನೋಟಿಸ್ ನೀಡಿರುವುದು ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಡನೆ ಮಾತನಾಡಿ, ಪ್ರವೀಣ್ ನೆಟ್ಟರ್ ಹತ್ಯೆ ಆಗದದ್ದಿರೆ ಈ ಸರಣಿ ಹತ್ಯೆ ನಡೆಯುತ್ತಿತ್ತೆ, ಪ್ರವೀಣ್ ನೆಟ್ಟರ್ ಕೊಲೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರೆ ಈ ಹತ್ಯೆಗಳು ಆಗುತ್ತಿರಲಿಲ್ಲ. ಪಿಎಫ್‌ಐ, ಕೆಎಫ್‌ಡಿಯನ್ನು ಮಟ್ಟ ಹಾಕುವುದ ಬಿಟ್ಟು ಹಿಂದೂ ನಾಯಕರಿಗೆ ನೋಟೀಸ್ ಕೊಟ್ಟಿರುವುದು ಎಷ್ಟು ಸರಿಯೇ, ಹಿಂದೂಗಳು ಧ್ವನಿ ಅಡಗಿಸಲು ಮಾಡಿರುವ ಕೆಲಸ. ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.