ಹಾಡಹಗಲೇ ಮನೆ ಕಳ್ಳತನ: ಚಿನ್ನ, ನಗದು ದೋಚಿದ ಕಳ್ಳರು

ಬಾಗಲಕೋಟೆ(ಇಳಕಲ್): ಕುಟುಂಬದ ವ್ಯಕ್ತಿಗೆ ಆರಾಮ ಇಲ್ಲದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋದ ಸಮಯದಲ್ಲಿ ಮನೆಯ ಬೀಗ ಮುರಿದ ಕಳ್ಳರು ಚಿನ್ನ ಮತ್ತು ನಗದು ಹಣವನ್ನು ದೋಚಿಕೊಂಡು ಹೋದ ಘಟನೆ ಹುಚನೂರ ನಾಗೂರ ರಸ್ತೆಯಲ್ಲಿ ನಡೆದಿದೆ.
ನಾಗಪ್ಪ ಸಂಗಮ ಎಂಬ ವ್ಯಕ್ತಿಯ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಅರಿತ ಕಳ್ಳರು ಮನೆಗೆ ಹೋಗಿ ತಿಜೋರಿಯಲ್ಲಿ ಇಟ್ಟಿದ್ದ ಒಂದು ಲಕ್ಷ 48 ಸಾವಿರ ರೂ. ಮೌಲ್ಯದ 70 ಗ್ರಾಂ ಬಂಗಾರ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಪೊಲೀಸರಿಗೆ ವಿಷಯ ಗೊತ್ತಾದ ನಂತರ ಕೂಡಲೇ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಮತ್ತು ಪೊಲೀಸ್ ಶ್ವಾನವನ್ನು ಕರೆಸಿ ತಪಾಸಣೆ ಮಾಡಲು ತೊಡಗಲಾಗಿದೆ. ಆದರೆ ಇವರೆಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ ಹಾಡಹಗಲೇ ನಡೆದ ಈ ದೊಡ್ಡ ಕಳ್ಳತನದಿಂದಾಗಿ ಸಾರ್ವಜನಿಕರು ಭಯಭೀತಗೊಂಡಿದ್ದಾರೆ.