ಮಾನ್ವಿ: ದೇಶದಲ್ಲಿಯೇ ಅತೀ ಹೆಚ್ಚು ಚಿನ್ನ ಉತ್ಪಾದನೆ ಮಾಡುವ ಸರಕಾರಿ ಸೌಮ್ಯದ ಕಂಪನಿ ಮತ್ತು ಕೈಗಾರಿಕೆ ಪ್ರದೇಶವಾಗಿರುವ ಚಿನ್ನದಗಣಿ ಕಂಪನಿಯ ಸುರಕ್ಷತಾ ದೃಷ್ಠಿಯಿಂದ ಕಂಪನಿ ವೀಕ್ಷಣೆ ಮಾಡುವ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಹಿನ್ನಲೆಯಲ್ಲಿ ದೇಶದಲ್ಲಿ ಯುದ್ದದ ಸನ್ನವೇಶಗಳು ಉಲ್ಬಣವಾಗುತ್ತಿರುವದರಿಂದ ಹಾಗೂ ಸುರಕ್ಷತಾ ಹಿತದೃಷ್ಠಿಯಿಂದ ಕೇಂದ್ರ, ರಾಜ್ಯ ಸರಕಾರಗಳ ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ದೇಶನ ಮೇರೆಗೆ ಕಂಪನಿ ಅಧಿಸೂಚಿತ ಪ್ರದೇಶ ಸುತ್ತಮುತ್ತ ನೂರಾರು ಸಿಸಿ ಟಿವಿ ಅಳವಡಿಕೆ ಮತ್ತು ಭದ್ರತಾ ಸಿಬ್ಬಂದಿಗಳಿಂದ ಕಂಪನಿ ವ್ಯಾಪ್ತಿಯ ಎಲ್ಲಾ ಕಡೆ ಸೂಕ್ತ ಭದ್ರತೆಯನ್ನು ಒದಗಿಸಿ ಇದರ ಜತೆಗೆ ಕಂಪನಿಗೆ ಬೇರೆ ಕಡೆಯಿಂದ ಹೊಸ ವ್ಯಕ್ತಿಗಳು ಬಂದರೆ ಅವರ ಆಧಾರಕಾರ್ಡ್‌ಗಳೊಂದಿಗೆ ಎಲ್ಲಾ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕಂಪನಿಯನ್ನು ವೀಕ್ಷಣೆ ಮಾಡಲು ಪ್ರತಿ ಶನಿವಾರ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಅದನ್ನು ಕಂಪನಿಯ ಸುರಕ್ಷತಾ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಂದು ಗಣಿ ಆಡಳಿತ ಮಂಡಳಿ ತಿಳಿಸಿದೆ. ದೇಶದಲ್ಲಿ ೨೦೦ಕ್ಕೂ ಹೆಚ್ಚು ಕಡೆ ಅಣಕು ಡ್ರಿಲ್ ಮಾಡಲು ಬುಧುವಾರ ನಿರ್ಧರಿಸಿದಂತೆ ಸೈರೆಲ್ ಮೂಲಕ ದೇಶದಲ್ಲಿ ಅಣಕು ಡ್ರಿಲ್ ಮಾಡಲಾಯಿತು. ಅದರಲ್ಲಿ ರಾಯಚೂರು ಜಿಲ್ಲೆ ಇರುವದು ಇಲ್ಲಿ ಸ್ಮರಿಸಬಹುದಾಗಿದೆ.