ಬಳ್ಳಾರಿ: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿ 8.14 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ನಿವಾಸಿ ಕುಮಾರ, ಆಂಧ್ರದ ಬಂಗಾರು ಪಾಲ್ಯಂ ನಿವಾಸಿ ಕೊನಗುಂಟ್ಲ ಸಾಯಿಕುಮಾರ ಬಂಧಿತರು. ಆರೋಪಿ ಸಾಯಿಕುಮಾರ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 3.75 ಲಕ್ಷ ರೂ. ಹಾಗೂ ಆರೋಪಿ ಕುಮಾರ ಬಿಲ್ಡಿಂಗ್ ಕಂಟ್ರಾೃಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ 5.64 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿಕೊಂಡು ವಂಚಿಸಿದ್ದರು. ಆರೋಪಿಗಳನ್ನು ತಾಂತ್ರಿಕ ಸಾಕ್ಷೃಧಾರಗಳ ಮೂಲಕ ಬಂಧಿಸಿ, 8.14 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಭೀಮಶ್, ಒಬಳೇಶ್ ಪ್ರತ್ಯೇಕವಾಗಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.