ನವದೆಹಲಿ: ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸ್ವರೂಪವೇ ಬದಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 11 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ದೇಶದ ಅರ್ಥವ್ಯವಸ್ಥೆ ಸಾಗಿದ್ದು, ಇಂದು ಇಡೀ ವಿಶ್ವ, ಭಾರತದತ್ತ ದೃಷ್ಟಿಹಾಯಿಸುತ್ತಿದೆ, ಕೋವಿಡ್ನಂಥ ವಿಪರೀತ ಸ್ಥಿತಿಯಲ್ಲಿ, ಜಗತ್ತಿನ ಅರ್ಥವ್ಯವಸ್ಥೆ ಅಯೋಮಯವಾಗಿದ್ದ ಸಂದರ್ಭದಲ್ಲಿಯೂ, ಭಾರತದ ಅರ್ಥವ್ಯವಸ್ಥೆ ಸ್ಥಿರವಾಗಿದೆ. ಇಂಥ ವಿಕೋಪದಲ್ಲಿಯೂ ಭಾರತ, 150 ಕ್ಕೂ ಅಧಿಕ ದೇಶಗಳಿಗೆ ಲಸಿಕೆ ನೀಡಿದೆ. 48 ದೇಶಗಳಿಗೆ ಉಚಿತ ಲಸಿಕೆ ನೀಡಲಾಗಿದೆ. ಕಟ್ಟಕಡೆಯ ಜನರಿಗೂ ಲಸಿಕೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗಿದೆ, 2014ಕ್ಕಿಂತ ಮುಂಚಿತವಾಗಿ, ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಆದರೆ ಇದೀಗ ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವ ಪ್ರಜಾಪ್ರಭುತ್ವದ ಧ್ಯೇಯವಾಕ್ಯವನ್ನು ಪಾಲಿಸುತ್ತಾ, ಅಭಿವೃದ್ಧಿಯ ಪಥದಲ್ಲಿ ದೇಶ ಸಾಗಿದೆ. ಹಲವಾರು ಸಮಸ್ಯೆಗಳ ನಡುವೆಯೂ, ಭಾರತ ಇದೀಗ ನಾಲ್ಕನೇ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. ಅತಿ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಹಲವಾರು ಕ್ಷೇತ್ರಗಳಲ್ಲಿ ಭಾರತ ಆತ್ಮನಿರ್ಭರವಾಗಿ ಮುನ್ನುಗ್ಗುತ್ತಿದೆ, 2014ಕ್ಕಿಂತ ಮೊದಲು, ಹಿಂದಿನ ಯುಪಿಎ ಸರ್ಕಾರವು ಭ್ರಷ್ಟಾಚಾರದಿಂದ ತುಂಬಿತ್ತು. ದೇಶದಾದ್ಯಂತ ನಕಾರಾತ್ಮಕ ಭಾವನೆ ಇತ್ತು. ಆದರೆ, 2014ರ ನಂತರ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಆ ಭಾವನೆ ಬದಲಾಯಿತು. ಈಗ ಜನರು ಹೆಮ್ಮೆಯಿಂದ, ‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂದು ಹೇಳುತ್ತಿದ್ದಾರೆ, ಸ್ವಾತಂತ್ರ್ಯಾ ನಂತರ, ಅಸಾಧ್ಯ ಎನ್ನಿಸಿಕೊಂಡಿರುವ ಹಲವು ಕಠಿಣ ಹಾಗೂ ಕಷ್ಟದ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. 370ನೇ ವಿಧಿಯನ್ನು ರದ್ದು ಮಾಡುವ ಮೂಲಕ, ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಗಾಧ ಪ್ರಗತಿಯಾಗುತ್ತಿದೆ. ಮುಸ್ಲಿಂ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದ, ತ್ರಿವಳಿ ತಲಾಖ್ ರದ್ದು ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ವಕ್ಫ್ ಕಾಯ್ದೆಯನ್ನು ರದ್ದು ಮಾಡುವಂತಹ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ. ಸೇನೆ, ಆರೋಗ್ಯ ಕ್ಷೇತ್ರ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಮಹಿಳೆಯರ ನೇತೃತ್ವದಲ್ಲಿಯೇ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಅದ್ಭುತ ಕೆಲಸಗಳನ್ನು ಮಾಡಿದ್ದು. ಅದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು ಅವರು ಬಣ್ಣಿಸಿದ್ದಾರೆ.