ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಬೆಡ್ ರೂಮ್ ಕೂಡ ಟ್ಯಾಪ್ ಆಗುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಯಾವ ದೊಡ್ಡ ಕೆಲಸ ಎಂದು ವ್ಯಂಗ್ಯವಾಡಿದ ಅವರು, ಅನೈತಿಕ ಚಟುವಟಿಕೆ, ಬ್ಲಾಕ್ ಮೇಲ್ ಮಾಡುವವರು ಶಕ್ತಿ ಸೌಧದಲ್ಲಿ ಕುಳಿತು ಆಡಳಿತ ನಡೆಸುವ ಸ್ಥಿತಿಗೆ ಬಂದಿದೆ ಎಂದರು.
ಹೆಣ್ಣು ಮಕ್ಕಳ ಮಾರ್ಯಾದೆ ತೆಗೆಯಲಾಗುತ್ತದೆ. 75 ವರ್ಷದಲ್ಲಿ ಇಂಥ ಕೆಟ್ಟ ಸರ್ಕಾರವನ್ನು ನಾವು ನೋಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಿ ಅಧಿಕಾರ ಬಿಟ್ಟು ಹೋಗಬೇಕು. ಹನಿಟ್ರ‍್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪದ ಬಳಿಕ ದೂರು ಆಗಬೇಕಿಲ್ಲ. ಸುಮೊಟೊ ಕೇಸ್ ದಾಖಲಿಸಿ ಸರ್ಕಾರ ತನಿಖೆ ಕೈಗೊಳ್ಳಬೇಕು. ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.