ಸಿದ್ಧಗಂಗಾ ಮಠದ ಮಾದರಿಯಲ್ಲಿ ತುಮಕೂರಿನ ರೈಲ್ವೆ ನಿಲ್ದಾಣ

ತುಮಕೂರಿನ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮೇಲ್ದರ್ಜೆಗೇರಲಿರುವ ಪ್ರಸ್ತಾವಿತ ಕಟ್ಟಡದ ಮುನ್ನೋಟ

ಬೆಂಗಳೂರು: ಸುಕ್ಷೇತ್ರ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮೇಲ್ದರ್ಜೆಗೇರಲಿದೆ ತುಮಕೂರಿನ ರೈಲ್ವೆ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕಟ್ಟಡದ ಮುನ್ನೋಟ ಹಂಚಿಕೊಂಡಿದ್ದು ತುಮಕೂರು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನವೀಕರಣಗೊಂಡ ನಿಲ್ದಾಣವು ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಲಾಂಜ್‌ಗಳು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಒಳಗೊಂಡಿರಲಿದೆ. ಅಲ್ಲದೇ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ. ತುಮಕೂರಿನ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮೇಲ್ದರ್ಜೆಗೇರಲಿರುವ ಪ್ರಸ್ತಾವಿತ ಕಟ್ಟಡದ ಮುನ್ನೋಟ ಹೀಗಿದೆ ಎಂದಿದ್ದಾರೆ.