ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ

ಧಾರವಾಡ: ಮುಖ್ಯಮಂತ್ರಿ ಬದಲಾವಣೆ ಬಗೆಗೆ ನಾವು ಯಾರೂ ಮಾತನಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನವಲಗುಂದದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಆಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅಥವಾ ಡಿ.ಕೆ. ಶಿವಕುಮಾರ ಅವರು ಮುಂದಿನ ಸಿಎಂ ಆಗುತ್ತಾರೆ ಎಂದು ಎಚ್. ವಿಶ್ವನಾಥ ಅವರು ಹೇಳಿರುವ ಬಗೆಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಜೊತೆಗೆ ಬೇರೆ ವಿಚಾರ ಚರ್ಚಿಸಲು ಹೈಕಮಾಂಡ್ ಸಿಎಂ, ಡಿಸಿಎಂ ಅವರನ್ನು ದೆಹಲಿಗೆ ಕರೆದಿತ್ತು. ಸಚಿವ ಸಂಪುಟ ಬದಲಾವಣೆ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದರು.