ಸಿಎಂಗೆ ಮನವಿ ಸಲ್ಲಿಸಲು ರೈತರಿಗೆ ಅಡ್ಡಿ: ಪೊಲೀಸರೊಂದಿಗೆ ವಾಗ್ವಾದ

ದಾವಣಗೆರೆ: ನಗರದ ಸರ್ಕಿಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಬಂದ ರೈತರಿಗೆ ಪೊಲೀಸರು ತಡೆಗಟ್ಟಲು ಪ್ರಯತ್ನಿಸಿದರು. ಈ ಮಧ್ಯೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮತ್ತು ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ಬಳಿ ಬಂದು ಮನವಿ ನೀಡಲು ಬಂದ ವೇಳೆ ಪೋಲೀಸರು ರೈತರನ್ನು ತಳ್ಳಿದರೆಂದು ಸಿಟ್ಟಾಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ರೈತನ ಆಕ್ರೋಶಕ್ಕೆ ಮಣಿದು ನಂತರ ಮುಖ್ಯಮಂತ್ರಿ ಬಳಿ ತೆರಳಲು ರೈತನಿಗೆ ಪೊಲೀಸರು ಅನುವು ಮಾಡಿಕೊಟ್ಟರು.
ದಾವಣಗೆರೆಯ ಸರ್ಕಿಟ್‌ ಹೌಸ್‌ನಲ್ಲಿ ಸೋಮವಾರ ಪೊಲೀಸರ ಗೌರವ ವಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರ್ವಜನಿಕರ ಅಹವಾಲು ಆಲಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ದಾವಣಗೆರೆಯ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿಯ ರೈತರಿಗೆ ಸಿಎಂ ಬಳಿಗೆ ತೆರಳಲು ಪೊಲೀಸರು ತಡೆದಿದ್ದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲೂರು ರವಿಕುಮಾರ್, ಸರ್ಕಿಟ್ ಹೌಸ್‌ನಿಂದ ತೆರಳುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ರೈತರು ಏಕಾಏಕಿ ತಡೆದು ಮನವಿ ಸ್ವೀಕರಿಸುವಂತೆ ಕೋರಿದರು. ಮುಖ್ಯಮಂತ್ರಿಯವರ ಕಾರನ್ನು ಚಾಲನೆ ಮಾಡುತ್ತಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್, ರೈತ ಮುಖಂಡರನ್ನು ಮನವೊಲಿಸಿ ಸಿಎಂಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.
ದಾವಣಗೆರೆ ಜಿಲ್ಲೆಯಲ್ಲಿರುವ 538 ಕೆರೆಗಳಲ್ಲಿ ಕೇವಲ 100 ಕೆರೆಗಳಲ್ಲಿ ಮಾತ್ರ ಹೂಳು ತೆಗೆಯಲಾಗಿದೆ. ಉಳಿದಿರುವ ಕೆರೆಗಳ ಹೂಳು ತೆಗೆದರೆ ದಾವಣಗೆರೆ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ಜಲ ಸಂರಕ್ಷಣೆಯ ದೃಷ್ಟಿಯಿಂದ ಕೆರೆಗಳನ್ನು ಉಳಿಸಿಕೊಳ್ಳುವ ಜಿಲ್ಲೆಯಲ್ಲಿರುವ 538 ಕೆರೆಗಳಲ್ಲಿ ಕೇವಲ 100 ಕೆರೆಗಳಲ್ಲಿ ಮಾತ್ರ ಹೂಳು ತೆಗೆಯಲಾಗಿದೆ. ಉಳಿದಿರುವ ಕೆರೆಗಳ ಹೂಳು ತೆಗೆದರೆ ದಾವಣಗೆರೆ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ಜಲ ಸಂರಕ್ಷಣೆಯ ದೃಷ್ಟಿಯಿಂದ ಕೆರೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇದಕ್ಕೆ ರಾಜ್ಯದ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ರೈತ ಬಲ್ಲೂರು ರವಿಕುಮಾರ್ ತಂಡದವರಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.