ಸರ್ಕಾರಕ್ಕೆ ಗಂಡಾಂತರ ಬಂದಾಗ ಜಾತಿ ಜನಗಣತಿ ಬಿದಿರು ಬೊಂಬೆಯಾಗುತ್ತೆ

ಜಾತಿ ಜನಗಣತಿಯನ್ನು ಸಿದ್ದರಾಮಯ್ಯನವರು ಬೊಂಬೆ ಆಟದಂತೆ ಮಾಡಿಕೊಂಡಿದ್ದಾರೆ

ಚಿಕ್ಕಮಗಳೂರು: ಕರ್ನಾಟಕವನ್ನು ದೇಶದಲ್ಲೇ ನಂಬ‌ರ್ ಒನ್ ಭ್ರಷ್ಟಾಚಾರ ಮಾಡಿರುವ ಸರ್ಕಾರ ಎಂದು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದರು.
ಅವರು ಗುರುವಾರ ಸಂಜೆ ನಗರದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿಯವರೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ ಎಂದರು
ಅಧಿಕಾರಕ್ಕಾಗಿ 40% ಕಮಿಷನ್‌ ಸರ್ಕಾರವೆಂದು ಬಿಜೆಪಿ ಮೇಲೆ ಅಪಪ್ರಚಾರ ಮಾಡಿದ್ರು ಆದ್ರೆ ಈಗ ಇಡೀ ದೇಶದಲ್ಲಿ 80%ಭ್ರಷ್ಟಾಚಾರದ ಸರ್ಕಾರ ಇದ್ರೆ ಅದು ಕರ್ನಾಟಕ ಸರ್ಕಾರ ಮಾತ್ರ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಜಾತಿ ಜನ ಗಣತಿ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಜಾತಿ ಜನಗಣತಿಯನ್ನು ಸಿದ್ದರಾಮಯ್ಯನವರು ಬೊಂಬೆ ಆಟದಂತೆ ಮಾಡಿಕೊಂಡಿದ್ದಾರೆ. ಕುರ್ಚಿ ಅಲುಗಾಡಿದಾಗ, ಸರ್ಕಾರಕ್ಕೆ ಗಂಡಾಂತರ ಬಂದಾಗ ಜಾತಿ ಜನಗಣತಿ ಬಿದಿರು ಬೊಂಬೆಯಾಗುತ್ತೆ. ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಪ್ರಚಾರ ಆಗಿದೆ ಎಂದರು, ವಾಲ್ಮೀಕಿ ಮೂಡಾ ಹಗರಣ ಸೇರಿ ಕುರ್ಚಿ ಅಲುಗಾಡಿದಾಗ ಜನಗಣತಿ ವಿಚಾರ ಮುನ್ನೆಲೆಗೆ ಬರುತ್ತೆ ಎಂದರು.

https://www.facebook.com/share/v/15VP9KCfFM