ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಮಾನವ ಸರಪಳಿ

ಬಾಗಲಕೋಟೆ(ಇಳಕಲ್): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ 2025 ರದ್ದು ಮಾಡಬೇಕು ಎಂದು ಆಗ್ರಹಿಸಿ ಇಂದು ಮುಸ್ಲಿಂ ಬಾಂಧವರು ಬೃಹತ್ ಪ್ರಮಾಣದ ಮಾನವ ಸರಪಳಿ ಮೂಲಕ ಬಸವೇಶ್ವರ ಸರ್ಕಲ್‌ದಿಂದ ತಹಶೀಲ್ದಾರ್‌ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡು ತಹಶೀಲ್ದಾರ್‌ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಈಶ್ವರ ಗಡ್ಡಿ ಇವರ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ, ಉಪಾಧ್ಯಕ್ಷ ಬಾವುದ್ದೀನ್ ಖಾಜಿ ಹಾಗೂ ಉಲೇಮಾಗಳು ಮಾತನಾಡಿ ಸಂವಿಧಾನ ವಿರೋಧಿ ನೀತಿ ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.